ಪಂಚಮಸಾಲಿ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ಮಹಾಂತ ಶಿವಾಚಾರ್ಯ ಮಹಾಸ್ವಾಮೀಜಿಯವರ 13ನೇ ವರ್ಷದ ಪುಣ್ಯಸ್ಮರಣೋತ್ಸವ

May 16, 2026

ದಿನಾಂಕ 04-02-2026ರ ಬುಧವಾರದಂದು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಅಂಗೈಕ್ಯ ಡಾ|| ಮಹಾಂತ ಶಿವಾಚಾರ್ಯ ಮಹಾಸ್ವಾಮೀಜಿಯವರ 13ನೇ ವರ್ಷದ ಪುಣ್ಯಸ್ಮರಣೋತ್ಸವವನ್ನು ಹರಿಹರದ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜಗದ್ಗುರುಗಳವರ ಕರ್ತೃಗದ್ದುಗೆಗೆ ಬೆಳಿಗ್ಗೆ 8-00 ಘಂಟೆಗೆ ಮಹಾರುದ್ರಾಭಿಷೇಕ ಮತ್ತು 09-30 ಘಂಟೆಗೆ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ಹಾಗೂ ಬೆಳಗ್ಗೆ 11-00 ಘಂಟೆಗೆ ಸಮಾಜ ಬಾಂಧವರಿಂದ ಜಗದ್ಗುರು ಮಹಾಂತ ಶ್ರೀಗಳ ಪಂಚಲೋಹದ ಮೂರ್ತಿ ಮತ್ತು ಶ್ರೀಗಳ ಪಾದುಕೆಯ ಪಲ್ಲಕ್ಕಿ ಉತ್ಸವ ಜರುಗುರುವುದು. ನಂತರ 12-00 ಘಂಟೆಗೆ ಪಂಚಮಸಾಲಿ ಜಗದ್ಗುರು ಶ್ರೀಶ್ರೀಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಧರ್ಮ ಸಭೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಎಲ್ಲಾ ಸರ್ವ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಭೆಯ ನಂತರ ಪ್ರಸಾದ ಸ್ವೀಕರಿಸಿ ಶ್ರೀಗಳವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.