ಸಮಾಜ ಸೇವೆಗೆ ಯಾರು ಬೇಕಾದರೂ ಬರಬಹುದು -ಬಸವರಾಜ ದಿಂಡೂರು

ಹರಿಹರ.ನ.22; ಸಮಾಜ ಸೇವೆ ಮಾಡಲು ಬರುವವರಿಗೆ ಯಾರೂ ಅಡ್ಡಿಪಡಿಸಲು ಸಾಧ್ಯವಿಲ್ಲ ಯಾರೂ ಬೇಕಾದರೂ ಬರಬಹುದು ಎಂದು ವೀರಶೈವ ಪಂಚಮಸಾಲಿ ಸಮಾಜದ ಮಾಜಿ ರಾಜ್ಯಾಧ್ಯಕ್ಷ ಬಸವರಾಜ ದಿಂಡೂರ ತಿಳಿಸಿದರು, ಅವರು ಹರಿಹರ ಸಮೀಪದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ನೂತನ ಜಗದ್ಗುರುಗಳ ಆಯ್ಕೆ ಮತ್ತು ಪೀಠದ ಕಟ್ಟಡ ಹಾಗೂ ಹರ ದೇವಾಲಯ ಕಟ್ಟಡಗಳ ಉದ್ಘಾಟನಾ ಸಮಾರಂಭ ಕುರಿತು ನಡೆದ ಸಮಾಜ ಬಾಂಧವರ ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು. ನಮ್ಮ ಆತ್ಮಶುದ್ದ ಇದ್ದರೆ ಯಾರಿಗೂ ಹೆದರಬೇಕಾಗಿಲ್ಲ ಮತ್ತು ಅನವಶ್ಯಕವಾಗಿ ಟೀಕೆ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಸಮಾಜ ನಿಂತ ನೀರಾಗದೆ ಹರಿಯುತ್ತಿರುವ ನದಿ ನೀರಿನಂತಾಗಬೇಕೆಂದು ಸಂಘಟನೆಯ ಮುಖಂಡರಿಗೆ ಕಿವಿ ಮಾತು ಹೇಳಿದರು. ಈಗ ಸಮಾಜ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವವರು ತಮ್ಮ ತಮ್ಮ ವೆಯಯಕ್ತಿಕ ವ್ಯವಹಾರಗಳ ಒತ್ತಡದಲ್ಲಿಯೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಅವರಿಗೆ ನಾವೆಲ್ಲಾ ಸಹಕರಿಸಬೇಕೆಂದು ಸಭಿಕರಿಗೆ ಕರೆ ಕೊಟ್ಟರು.

ಮಾಜಿ ರಾಜ್ಯಾಧ್ಯಕ್ಷರಾದ ಬಾವಿ ಬೆಟ್ಟಪ್ಪನವರು, ಸಮಾಜದ ಸರ್ವ ಬಾಂಧವರು ಪೀಠ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸಬೇಕೆಂದು ಕರೆ ಕೊಟ್ಟರು. ಸಭೆಯಲ್ಲಿ ಮಾತನಾಡಿದ ಪಂಚಮಸಾಲಿ ಜಗದ್ಗುರು ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿಯವರು ಶ್ರೀಪೀಠದ ಹಾಗೂ ಹರ ದೇವಾಲಯ ಕಟ್ಟಡ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕಿನ ಪದಾಧಿಕಾರಿಗಳು ದೇಣ ಗೆ (ಹಣ) ಸಂಗ್ರಹಿಸಬೇಕು. ಕೇಳುವ ಕೈ ಶುದ್ದವಾಗಿದ್ದಾರೆ ಕೊಡುವ ಕೈಗಳಿಗೆ ಬರವಿಲ್ಲವೆಂಬುದನ್ನು, ದಾವಣಗೆರೆ ದಾನಿಗಳು ಕೊಟ್ಟ ದಾನದ ಬಗ್ಗೆ ಉದಾಹರಿಸಿದ ಅವರು ಎಲ್ಲಾ ಸಮಾಜ ಬಾಂಧವರು ಕಟ್ಟಡ ಕಾರ್ಯಗಳನ್ನು ಮುಗಿಸಲು ಉದಾರವಾಗಿ ದಾನ ನೀಡುವಂತೆ ಕೇಳಿಕೊಂಡರು,

ಸಭೆಯ ಅಧ್ಯಕ್ಚತೆ ವಹಿಸಿ ಮಾತನಾಡಿದ ಸಮಾಜದ ರಾಜ್ಯಾಧ್ಯಕ್ಷ ಬಿ. ನಾಗನಗೌಡರು ನಾವು ಸಮಾಜ ಸಂಘಟನೆಗೆ ಬಂದಿರುವುದು ಶಾಸಕರಾಗಲೆಂದಾಗಲಿ, ಮಂತ್ರಿಗಳಾಗಲು ಬಂದ್ಲಿಲ್ಲ, ನಮ್ಮ ಸಮಾಜಕ್ಕೆ ಸೇವೆ ಸಲ್ಲಿಸುವ ಉದ್ದೇಶದಿಂದ ಎಲ್ಲರೂ ಸಂಘಟನೆಯಲ್ಲಿ ತೆÀೂಡಗಿಸಿಕೊಂಡಿದ್ದೇವೆ, ನಿಮ್ಮಿಂದ ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸುವದಿದ್ದರೆ ಸೇವೆ ಮಾಡಿ ನಿಮ್ಮ ಕೈಲಾದರೆ ದಾನ ಮಾಡಿ ಅದಾಗದಿದ್ದಲ್ಲಿ ಕೆಲಸ ಮಾಡುವವರಿಗೆ ಪ್ರೋತ್ಸಾಹಿಸಿ ಅದೂ ಆಗದಿದ್ದಲ್ಲಿ ನಿಮ್ಮ ಪಾಡಿಗೆ ನೀವಿದ್ದುಬಿಡಿ ಅದು ಬಿಟ್ಟು ಇಲ್ಲ ಸಲ್ಲದ ವಿಚಾರಗಳನ್ನು ವಾಟ್ಸಾಫ್‍ಗಳಲ್ಲಿ, ಫೇಸ್‍ಬುಕ್‍ಗಳಲ್ಲಿ ಕಳಿಸುವುದನ್ನು ಮಾಡಿದರೆ ಸಮಾಜ ಸಹಿಸದು ಎಂದು ಟೀಕಾಕಾರಿಗೆ ಎಚ್ಚರಿಕೆ ನೀಡಿದರು,

ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ನಿಂಗಮ್ಮ ಬಾವಿಕಟ್ಟಿ, ರಾಜ್ಯ ಉಪಾಧ್ಯಕ್ಷರಾದ ಜಿ.ಪಿ. ಪಾಟೀಲ್, ಮಾತನಾಡಿದರು, ತೆರವಾಗಿರುವ ಸ್ಥಿರ ಪೀಠಾಧ್ಯಕ್ಷರಾಗಿದ್ದ ಲಿಂಗೈಕ್ಯ ಡಾ. ಮಹಾಂತ ಶಿವಾಚಾರ್ಯರ ಸ್ಥಾನಕ್ಕೆ ನೂತನ ಜಗದ್ಗುರುಗಳ ಆಯ್ಕೆ ಸಮಿತಿ ಪ್ರಸ್ತಾಪವನ್ನು ರಾಜ್ಯಾಧ್ಯಕ್ಷರು ಮಾಡಿದಾಗ ಈಗಿರುವ ಟ್ರಸ್ಟ ಮತ್ತು ರಾಜ್ಯ ಸಂಘದ ಪದಾಧಿಕಾರಿಗಳೇ ಆ ಸಮಿತಿಯಲ್ಲಿರಲಿ ಎಂದು ಸಭೆ ಸರ್ವಾನುಮತ ದಿಂದ ಅನುಮೋದಿಸಿತು. ಸಭೆಯಲ್ಲಿ ರಾಜ್ಯ ಸಂಘದ ಸದಸ್ಯರು ಟ್ರಸ್ಟ್‍ನ ಧರ್ಮದರ್ಶಿಗಳು, ವಿಶೇಷ ಆಹ್ವಾನಿತರು, ಜಿಲ್ಲಾಧ್ಯಕ್ಷರು ಮತ್ತು ತಾಲ್ಲೂಕಾಧ್ಯಕ್ಷರುಗಳು ಇದ್ದರು.

 

 

 

 

 

 

 

Go to top