ದೆಹಲಿಯ ಲೋಕಸಭಾ 7 ನೇಯ ಗೇಟ್ ಮುಂಭಾಗದ ಆವರಣದಲ್ಲಿ ಇರುವ ವೀರರಾಣಿ ಕಿತ್ತೂರು ಚನ್ನಮ್ಮ 200 ನೇಯ ವಿಜಿಯೋತ್ಸವ ಮೊಟ್ಟ ಮೊದಲ ಭಾರಿಗೆ ಲೋಕಸಭಾ ಅಧ್ಯಕ್ಷರು ಶ್ರೀ ಓಂ ಪ್ರಕಾಶ ಬಿರ್ಲಾ ಪುಷ್ಪಅರ್ಪಣೆ ಮಾಡೋದರ ಮೂಲಕ ಅದ್ದೂರಿ ಆಚರಣೆಗೆ ಚಾಲನೆ ಕೊಟ್ಟರು ಈ ಸಂದರ್ಭದಲ್ಲಿ ಪಂಚಮಸಾಲಿ ಜಗದ್ಗುರು ಪೀಠದ ಪರಮ ಪೂಜ್ಯ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು,  ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ,ಶ್ರೀ ವಿ ಸೋಮಣ್ಣ ರಾಜ್ಯಸಭಾ ಸದಸ್ಯರು ಶ್ರೀ ಈರಣ್ಣ ಕಡಾಡಿ, ಶ್ರೀ ಲೆಹಾರಸಿಂಘ, ವಿಧಾನ ಸಭೆ ಸದಸ್ಯರು ಶ್ರೀ ಅರವಿಂದ ಬೆಲ್ಲದ, ಪಂಚಮಸಾಲಿ  ಸಂಘದ  ರಾಜ್ಯ ಅಧ್ಯಕ್ಷರು ಶ್ರೀ ಸೋಮನಗೌಡ ಎಮ್ ಮಾಲಿಪಾಟೀಲ್, ಶ್ರೀಪೀಠದ ಟ್ರಸ್ಟ್ ಸದಸ್ಯರು ಶ್ರೀ ಚಂದ್ರಶೇಖರ ಪೂಜಾರ, ಯುವ ಘಟಕ ರಾಜ್ಯ ನೂತನ ಪ್ರಧಾನ ಕಾರ್ಯದರ್ಶಿ ಶ್ರೀ ಶೇಖರ ಮುತ್ತೇನವರ ಅಲ್ಲದೇ ದೆಹಲಿ ಕನ್ನಡ ಸಂಘದ 300 ಹೆಚ್ಚು ಸದಸ್ಯರು, ರೈಲ್ವೆ ಇಲಾಖೆ ನೌಕರರು ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದ ಈ ಕಾರ್ಯಕ್ರಮ ಐತಿಹಾಸಿಕ ಮೊಟ್ಟ ಮೊದಲ ಭಾರಿಗೆ ಅದ್ದೂರಿಯಾಗಿ ನಡೆಯಿತು,