email: [email protected] | phone: (08192) 222008 / 224914 | Sri Peetha: 94819 27666

ದಾವಣಗೆರೆ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದಲ್ಲಿ ಜಿಲ್ಲಾ ಯುವ ಘಟಕದ ನೇತೃತ್ವದಲ್ಲಿ ಹರ ಸೇವಾ ಸಂಸ್ಥೆ ಹಾಗೂ ಜಿಲ್ಲೆಯ ಎಲ್ಲಾ ಘಟಕಗಳ ಸಹಯೋಗದಲ್ಲಿ ದಾವಣಗೆರೆಯಲ್ಲಿಂದು ಸಮಾಜದ ಖಚೇರಿಯಲ್ಲಿ ಕನ್ನಡ ರಾಜ್ಯೋತ್ಸವ, ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಆಚರಿಸಲಾಯಿತು.  ಸನ್ಮಾನ ಸ್ವೀಕರಿಸಿ ಮಾತನಾಡಿದ ಬೆಂಗಳೂರಿನ ಬೆಳಕು ಅಕಾಡೆಮಿಯ ಸಂಸ್ಥಾಪಕಿ ಅಶ್ವಿನಿ ಅಂಗಡಿಯವರು ಮಾತನಾಡಿ ತಾಯಂದಿರು ಮಕ್ಕಳನ್ನು ಜರಿಯದೆ  ಪ್ರೋತ್ಸಾಹಿಸುವ ಮೂಲಕ ಅವರನ್ನು ಸಾಧನೆಗೆ ಹುರಿದುಂಬಿಸಬೇಕು. ಮಕ್ಕಳಿಗೆ ಋಣಾತ್ಮಕ ವಿಚಾರಗಳ ಬಗ್ಗೆ ಹೇಳದೆ ಧನಾತ್ಮಕವಾದ ವಿಷಯಗಳನ್ನು ಹೇಳಬೇಕು. ಬೇರೆಯವರನ್ನು ಹೋಲಿಕೆ ಮಾಡಿ ಜರಿಯದೆ ಅವರು ಸಾಧನೆ ಮಾಡಲು ಸಹಕರಿಸಬೇಕೆಂದು ಹೇಳಿದ ಅವರು ಈಗಾಗಲೇ ತಮ್ಮ ಸಂಸ್ಥೆಯಲ್ಲಿ ಅನಾಥ,ಅಂಧ ಮತ್ತು ಬುದ್ದಿಮಾಂದ್ಯರಾದ 200 ಮಕ್ಕಳಿದ್ದು ಇಂತಹ ಮಕ್ಕಳಿದ್ದಲ್ಲಿ ತಮ್ಮ ಮಡಿಲಿಗೆ ಹಾಕುವಂತೆ ಕೇಳಿಕೊಂಡರು. ಸಮಾಜದ ಜಿಲ್ಲಾದ್ಯಕ್ಷರಾದ ಬಿ.ಸಿ. ಉಮಾಪತಿಯವರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಥತಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಯುವ ಘಟಕದ ಸ್ವರೂಪ್ ಅಂಗಡಿ, ಶಿವಕುಮಾರ್ ಹೊಸ್ಕೆರೆ, ಸುರೇಶ್ ಹಡ್ಲಿಗೇರೆ, ಚಂದ್ರಶೇಖರ್ ನೂಲ,ನೌಕರ ಘಟಕದ ಶ್ರೀಧರ್,ಕುಬೇರಪ್ಪ, ಸುರೇಶ,ದೇವರಾಜ್, ಮಹಿಳಾ ಘಟಕದ ಶ್ರೀಮತಿ ಸುಷ್ಮಾ ಪಾಟಿಲ್, ಶ್ರೀಮತಿ ವೀಣಾನಟರಾಜ್ ಬೆಳ್ಳೂಡಿ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆರಂಭದಲ್ಲಿ ಶ್ರೀಮತಿ ಮೀನಾ ಪ್ರಸಾದ ಮತ್ತು ಶ್ರೀಮತಿ ಸುಜಾತ ಪ್ರಾರ್ಥಿಸಿದರು, ಜಿಲ್ಲಾ ಯುವ ಘಟಕದ ಅದ್ಯಕ್ಷ ಶಿವಕುಮಾರ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಕಾಶಿನಾಥ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಮಾರ್ ಹುಂಬಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಮ್ಮುವಿನಲ್ಲಿ ವೀರ ಮರಣವನ್ನಪ್ಪಿದ ಕನ್ನಡಿಗ ಕ್ಯಾಪ್ಟನ್ ಪ್ರಾಂಜಲ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ನಿವೃತ್ತ ಯೋಧ ಮಲ್ಲನಗೌಡ ಪಾಟಿಲ್,  ಅಂಧ ದಂಪತಿಗಳು ಮತ್ತು ಸಾಧಕರಾದ ವೀರೇಶ್ ಸಂಗಡಿ ಮತ್ತು ಶ್ರೀಮತಿ ಅಶ್ವಿನಿ ಅಂಗಡಿ ಇವರನ್ನು ಸನ್ಮಾನಿಸಲಾಯಿತು

ಮುಂಡರಗಿ ತಾಲ್ಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಆಯೋಜಿಸಿದ ವೀರರಾಣಿ ಕಿತ್ತೂರು ಚನ್ನಮ್ಮಾಜೀ ವಿಜಯೋತ್ಸವದ ಮೆರವಣಿಗೆ ಹಾಗೂ ಸಮಾರಂಭದಲ್ಲಿ ದಿವ್ಯಸಾನಿಧ್ಯ ವಹಿಸಿ ಹರಸಿ ಹಾರೈಸಿದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು.

Back to Top