email: [email protected] | phone: (08192) 222008 / 224914 | Sri Peetha: 94819 27666

ಹರಪೀಠಾಧ್ಯಕ್ಷ ಪಂಚಮಸಾಲಿ ಜಗದ್ಗುರು ಲಿಂ.ಡಾ.ಶ್ರೀ ಶ್ರೀ ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ 9 ನೇ ಪುಣ್ಯಸ್ಮರಣೋತ್ಸವದಂದು ಕರ್ತೃ ಗದ್ದುಗೆಗೆ “ಗುರುನಮನ” ಸಲ್ಲಿಸುತ್ತಿರುವುದು.

ದಿನಾಂಕ 03-02-2022ರಂದು  ಕರ್ನಾಟಕ ರಾಜ್ಯದ ಸನ್ಮಾನ್ಯ ರಾಜ್ಯಪಾಲರಾದ ತಾವರ್ಚಂದ್ ಗೆಹ್ಲೋತ್ ಅವರನ್ನು ರಾಜಭವನದಲ್ಲಿ ಭೇಟಿಯಾಗಿ ಸೌಹಾರ್ದಯುತವಾಗಿ ಮಾತುಕತೆ ನಡೆಸಲಾಯಿತು.
ನಮ್ಮ ನೇತೃತ್ವದಲ್ಲಿ ನಡೆಯುತ್ತಿರುವ ಪಂಚಮಸಾಲಿಗಳ ಮೀಸಲಾತಿ ಹೋರಾಟ, ರಾಜ್ಯದ ಪ್ರಸ್ತುತ ಬೆಳವಣಿಗೆಗಳು ಹಾಗೂ ಹರಕ್ಷೇತ್ರ ಹರಿಹರದಲ್ಲಿ ನಡೆಸಲಾಗುತ್ತಿರುವ ಕಾರ್ಯಕ್ರಮ ಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.
ಕೇಂದ್ರ ಸಾಮಾಜಿಕ‌ ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸಿರುವ ಇವರು, ದೇಶದ ಮೀಸಲಾತಿ ವ್ಯವಸ್ಥೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು.
ಇದೇ ವೇಳೆ ಸನ್ಮಾನ್ಯ ರಾಜ್ಯಪಾಲರು ಯೋಗಾಭ್ಯಾಸದ ಬಗ್ಗೆ ಹಲವಾರು ಮಾಹಿತಿಗಳನ್ನು ನಮ್ಮಿಂದ ಪಡೆದುಕೊಂಡರು. ರಾಜ್ಯದ ಉದ್ದಗಲಕ್ಕೂ ಸಂಚರಿಸುತ್ತಿರುವ ರಾಜ್ಯಪಾಲರನ್ನು ನಮ್ಮ ಹರಕ್ಷೇತ್ರ ಕ್ಕೆ ಭೇಟಿ ನೀಡುವಂತೆ ಮನವಿ ಸಲ್ಲಿಸಲಾಯಿತು.
ಹರಿಹರ ದಲ್ಲಿ ನಡೆಯುತ್ತಿರುವ ತುಂಗಾ ಆರತಿ ಯೋಜನೆ ಯ ಬಗ್ಗೆ ರಾಜ್ಯಪಾಲರು ಮಾಹಿತಿಯನ್ನು ಪಡೆದುಕೊಂಡರು. ಆತ್ಮೀಯ ಸ್ವಾಗತ ನೀಡಿ ಹೃದಯಪೂರ್ವಕವಾಗಿ ಆದರಿಸಿ ನಮ್ಮ ಮಾತುಗಳಿಗೆ ಕಿವಿಯಾದ ರಾಜ್ಯಪಾಲರಿಗೆ ಧನ್ಯವಾದಗಳು

ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಕ್ಷೇತ್ರ ಹರಿಹರ.


I had the honour of meeting and interacting with His Excellency, Governor of Karnataka state, Sri Thawar Chand Gehlot Ji at his residence-Raj Bhavan,Bangaluru.

We spoke at length about the current affairs of our state and especially our struggle of obtaining reservation for the Panchamsaali community which I have been leading from the front.

We also spoke in detail about the relentless developmental work we have undertaken in Harihara and rest of Karnataka through our Veerashaiva Lingayata Panchamsaali Peetha, Harihara.

I must admit, he is one of the finest statesman I have ever seen. Humble yet clear with his vision.

We the people of Karnataka are fortunate to have him look over us. We wish him the best in all his endeavours. May he be blessed with the Krupa of Mahadeva.

Jagadguru Sri Sri Sri Vachananand Mahaswamiji
Veerashaiva Lingayat Panchamsali Jagadguru Peetha, Harakshetra Harihar.

ಉಪರಾಷ್ಟ್ರಪತಿ ಶ್ರೀ ವೆಂಕಯ್ಯನಾಯ್ಡು ಅವರ ಪ್ರೀತಿ ಹಾಗೂ ಕಾಳಜಿಗೆ ಧನ್ಯವಾದಗಳು

ಇಂದು ಸನ್ಮಾನ್ಯ ಉಪರಾಷ್ಟ್ರಪತಿಗಳಾದ ಶ್ರೀ ವೆಂಕಯ್ಯನಾಯ್ಡು ಅವರು ನಮಗೆ ದೂರವಾಣಿ ಮೂಲಕ ಸಂಪರ್ಕಿಸಿ ಬಹಳ ಹೊತ್ತು ತಮ್ಮ ಪ್ರೀತಿ ಹಾಗೂ ಆದರದ ಮಾತುಗಳಿಂದ ಸತ್ಕರಿಸಿದರು. ಅಲ್ಲದೆ, ಓಮಿಕ್ರಾನ್‌ ಭೀತಿ ಕಡಿಮೆ ಆದ ನಂತರ ಸಂಸತ್‌ ಭವನಕ್ಕೆ ಆಹ್ವಾನಿಸಿದ್ದು ಹಾಗೆಯೇ ಹರಿಹರ ಕ್ಷೇತ್ರಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದು ಬಹಳ ಸಂತಸ ತಂದಿತು.

ಇದೇ ತಿಂಗಳ 14 ಮತ್ತು 15 ರಂದು ಹರಕ್ಷೇತ್ರ ಹರಿಹರದಲ್ಲಿ ಆಯೋಜಿಸಲಾಗಿರುವ ಹರಜಾತ್ರೆಗೆ ಉಪರಾಷ್ಟ್ರಪತಿಗಳನ್ನು ಆಹ್ವಾನಿಸಲಾಗಿತ್ತು. ಆಹ್ವಾನ ಪತ್ರ ತಲುಪಿದ ನಂತರ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೊಶಿ ಅವರಿಂದ ನಮ್ಮ ಬಗ್ಗೆ ಹಾಗೂ ಪಂಚಮಸಾಲಿ ಜಗದ್ಗುರು ಪೀಠದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿಕೊಂಡಿದ್ದರು ಎನ್ನುವುದು ತಿಳಿಯಿತು.

ಅಜಾದಿ ಕಾ ಅಮೃತ್‌ ಮಹೋತ್ಸವ ಹಿನ್ನಲೆಯಲ್ಲಿ ಪಂಚಮಸಾಲಿ ಸಮಾಜ ಹಾಗೂ ಐತಿಹಾಸಿಕ ಹಿನ್ನೆಲೆ ಬಗ್ಗೆ ನಮ್ಮಿಂದ ಉಪರಾಷ್ಟ್ರಪತಿಯವರು ಮಾಹಿತಿ ಪಡೆದರು. ಬೆಳವಡಿ ಮಲ್ಲಮ್ಮ, ಕೆಳದಿ ಚನ್ನಮ್ಮ ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮ ಹೀಗೆ ಪಂಚಮಸಾಲಿ ಸಮಾಜದ ವೀರ ಮಹಿಳೆಯರ ಬಗ್ಗೆಯೂ ಮಾಹಿತಿಯನ್ನು ನೀಡಿದೆವು. ಹಾಗೆಯೇ, ರಾಜ್ಯದಲ್ಲಿ 85ಲಕ್ಷ ಹಾಗೂ ಮಹಾರಾಷ್ಟ್ರ, ತೆಲಂಗಾಣ, ಆಂದ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದಲ್ಲಿ ಒಂದು ಕೋಟಿ 50 ಲಕ್ಷ ಪಂಚಮಸಾಲಿಗಳಿರುವ ಬಗ್ಗೆ ಉಪರಾಷ್ಟ್ರಪತಿಗಳಿಗೆ ತಿಳಿಸಲಾಯಿತು.

ಸದ್ಯ ದೇಶದಲ್ಲಿ ಓಮಿಕ್ರಾನ್ ಭೀತಿ ಹೆಚ್ಚಾಗಿದೆ‌. ಇದೇ ತಿಂಗಳು 14 ಮತ್ತು 15 ರಂದು ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಆಯೋಜಿಸಿರುವ ಹರಜಾತ್ರೆ ಮುಂದೂಡುವಂತೆ ಉಪರಾಷ್ಟ್ರಪತಿಯವರು ಸಲಹೆ ನೀಡಿದ್ದಾರೆ. ಅಲ್ಲದೆ, ಓಮಿಕ್ರಾನ್ ಭೀತಿ ಕಡಿಮೆ ಆದ ಬಳಿಕ ಹರಜಾತ್ರೆಯಲ್ಲಿ ಪಾಲ್ಗೊಳ್ಳಲು ಹರಿಹರಕ್ಕೆ ಬರುವುದಾಗಿ ನಮಗೆ ಭರವಸೆಯನ್ನು ನೀಡಿದ್ದಾರೆ.

ಅವರ ಕಾಳಜಿ ಹಾಗೂ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು.

ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಕ್ಷೇತ್ರ ಹರಿಹರ.

 
 
Back to Top