email: [email protected] | phone: (08192) 222008 / 224914 | Sri Peetha: 94819 27666

 

ದಿನಾಂಕ 08/06/2022 ರಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ದಾವಣಗೆರೆ ಜಿಲ್ಲಾ ಮತ್ತು ನಗರ, ಹಾಗು ಹೊನ್ನಾಳಿ, ನ್ಯಾಮತಿ,ಹರಿಹರ, ಜಗಳೂರು, ಹರಪನಹಳ್ಳಿ, ರಾಣೆಬೆನ್ನೂರು ತಾಲ್ಲೂಕು ಪಂಚಮಸಾಲಿ ಮಹಿಳಾ ಘಟಕಗಳ 

ಹಾಗೂ ಸಮಾಜದ ವಿವಿಧ ಪಂಚಮಸಾಲಿ ಘಟಕಗಳ ಸಹಯೋಗದೊಂದಿಗೆ "ಅಂತಾರಾಷ್ಟ್ರೀಯ ಪರಿಸರ ದಿನಾಚರಣೆ ಅಂಗವಾಗಿ” ಸಸಿ ನೆಡುವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾವಣಗೆರೆ ಜಿಲ್ಲಾ ಪಂಚಮಸಾಲಿ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಸುಷ್ಮ  ಪಾಟೀಲ್ ರವರು ವಹಿಸಿದರು,  ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯ

ನಿವೃತ್ತ ಅಧಿಕಾರಿಗಳಾದ ಶ್ರೀ ಕೆ.ಬಿ.ಕೊಟ್ರೇಶ್ ರವರು ಮಾತನಾಡಿ ಪರಿಸರ ಮಾಲಿನ್ಯದ  ಬಗ್ಗೆ ಹಲವು ಮಾಹಿತಿಯನ್ನು ನೀಡಿದರು,

ಹಾಗೂ ದಾವಣಗೆರೆ ಜಿಲ್ಲಾ ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಿ.ಸಿ. ಉಮಾಪತಿಯವರು, ಸಮಾಜದ ಮಹಿಳಾ ಮುಖಂಡರಾದ ಶ್ರೀಮತಿ ವಸಂತ ಬಸವರಾಜ್ ಹುಲ್ಲತ್ತಿಯವರು, ಶ್ರೀಮತಿ ರಶ್ಮಿ ನಾಗರಾಜ್ ಕುಂಕೋದ್ ದಾವಣಗೆರೆ ನಗರ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ವೀಣಾ ನಟರಾಜ್ ಬೆಳ್ಳೂಡಿ, ನಗರ ಪ್ರಧಾನ ಕಾರ್ಯದರ್ಶಿ ಶ್ರೀಮತಿ  ಪಾರ್ವತಿ ಶಿವಕುಮಾರ್ ಮತ್ತಿಹಳ್ಳಿ , ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ವಾಣಿ ಶಿವಣ್ಣನವರು, ಎಂ. ದೊಡ್ಡಪ್ಪ, ಜಿಲ್ಲಾ ನೌಕರರ ಘಟಕದ ಅಧ್ಯಕ್ಷರು ಶ್ರೀಧರ, ಕಾರ್ಯದರ್ಶಿ ಬಿ.ಎಸ್. ಶಂಭುಲಿಂಗಪ್ಪ, ಎ. ವೀರಭದ್ರಪ್ಪ, ಜಿಲ್ಲಾ ಕಾರ್ಯದರ್ಶಿ ಎಸ್.ಸಿ.  ಕಾಶೀನಾಥ್ , ಮಲ್ಲಿನಾಥ್ . ಎಸ್,  ಕೆ.ಸಿ. ಉಮಾಕಾಂತ್, ಜಿ. ಷಣ್ಮುಖಪ್ಪ ಮೇಷ್ಟ್ರು, ವಿಜಯನಗರ ಜಿಲ್ಲಾ ಅಧ್ಯಕ್ಷರಾದ ಶ್ರೀ. ಪ್ರಕಾಶ್ ಪಾಟೀಲ್ ರವರು,  ನಗರ ನೌಕರರ ಘಟಕದ ಅಧ್ಯಕ್ಷರು ಸುರೇಶ್,  ದಾವಣಗೆರೆ ತಾಲ್ಲೂಕ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪುರವಂತರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮೀನಾ ಪ್ರಸಾದ್ ಅಣಪೂರ್ ರವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು ಸಮಾಜದ ಹಿರಿಯರು ಹಾಗೂ  ಎಲ್ಲಾ ಘಟಕಗಳ ಪ್ರತಿನಿಧಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.   

 

ವಿಶ್ವಪ್ರಸಿದ್ಧ ಪಟ್ಟದಕಲ್ಲು ಸ್ಮಾರಕದ ಆವರಣದಲ್ಲಿ ಯೋಗ ಮಹೋತ್ಸವವು ಯಶಸ್ವಿಯಾಗಿ ಜರುಗಿತು.
 
 

 

ವಿಜಯನಗರ  ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ, ವಿಶ್ವ ವಿಖ್ಯಾತ ಹಂಪಿಯಲ್ಲಿ ಯೋಗೋತ್ಸವಕ್ಕೆ ಚಾಲನೆ, ಹಂಪಿಯ ಶ್ರೀ ವಿಜಯ ವಿಠ್ಠಲ ದೇವಾಲಯದಲ್ಲಿ ಯೋಗೋತ್ಸವಕ್ಕೆ ಚಾಲನೆ, 

ವಿನಯ್ ಗುರೂಜಿ ಅವರಿಂದ ಚಾಲನೆ, ವಿಜಯನಗರ ಸಾಮ್ರಾಜ್ಯ ರಾಜ್ಯಭಾರವನ್ನು ಕಲಿಸಿದ ಸಾಮ್ರಾಜ್ಯ ವಚನಾನಂದರೆಂದ್ರೆ ಅಭಿನಯ ಬಸವಣ್ಣನವರು, ಅವರು ಏನೇ ಮಾಡಿದ್ರು, ಹೊಸದಿರ್ತದೆ

ಯೋಗ ನಮ್ಮನ್ನು ಸ್ವತಂತ್ರಗೊಳಿಸಲಿ, ಒಳ್ಳೆ, ಆರೋಗ್ಯವಿದ್ದರೆ ಸಾಕು  ಯೋಗದಿಂದ, ರೋಗ ಮುಕ್ತ ಮಾಡೋದಕ್ಕೆ ವಚನಾನಂದ ಶ್ರೀಗಳು ಜೀವನ ಮುಡಿಪಾಗಿಟ್ಟಿದ್ದಾರೆ

ಈ ಯೋಗದಿಂದ ಹಂಪಿ ಹಾಳು ಹಂಪಿಯಾಗಲ್ಲಾ, ಹೊಸ ಹಂಪಿ ಆಗುತ್ತದೆ ಶ್ರೀ ಕೃಷ್ಣದೇವರಾಯ ಹೇಗೆ ಹಂಪಿಗೆ ಫೇಮಸ್ಸೋ, ಹಂಪಿ ಇರೋವವರೆಗೆ ಆನಂದ್ ಸಿಂಗ್ ಅವರ ಹೆಸರು ಕೂಡ ಇರ್ತದೆ

ಹಂಪಿಯಲ್ಲಿ ಯೋಗ ವಿವಿ ಆಗಲಿ, ಮೂಲ ಉದ್ದೇಶ ಪೂರೈಕೆಯಾಗಲಿ ಯೋಗೋತ್ಸವದಲ್ಲಿ ಶ್ರೀ ವಿನಯ್ ಗುರೂಜಿ ಹೇಳಿಕೆ ಶ್ವಾಸಗುರು ಶ್ರೀ ವಚನಾನಂದ ಶ್ರೀ, ಪತಂಜಲಿ ಯೋಗ ಸಮಿತಿಯ

ಭವರ್ ಲಾಲ್ ಆರ್ಯ , ಸಚಿವ ಆನಂದ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಭಾಗಿ

Back to Top