ದಿನಾಂಕ 29-09-2024ರಂದು ಶ್ರೀ ಶ್ರೀ ಶ್ರೀ ಜಗದ್ಗುರು ಲಿಂಗೈಕ್ಯ ಡಾ॥ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ 87ನೇ ಜಯಂತ್ಯೋತ್ಸವ ಪ್ರಯುಕ್ತ ಶ್ರೀಶ್ರೀಶ್ರೀ ಜಗದ್ಗುರು ಮಹಾದೇವ ಶಿವಾವಾರ್ಯ ಮಹಾಸ್ವಾಮಿಗಳು ಪಂಚಮಸಾಲಿ ಜಗದ್ಗುರು ಪೀಠ ಅಲಗೂರು\ಬಬಲೇಶ್ವರ, ಹಾಗೂ ಶ್ರೀ ಷ|| ಬ್ರ|| ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಹೀರೆಮಠ ಮನಗೂಳಿ ಇವರುಗಳ ದಿವ್ಯ ಸಾನಿದ್ಯದಲ್ಲಿ ಲಿಂಗೈಕ್ಯ ಜಗದ್ಗುರುಗಳವರ ಕರ್ತೃಗದ್ದುಗೆಯಲ್ಲಿ ಜಗದ್ಗುರುಗಳ ನೂತನ ಪಂಚಲೋಹದ ಉತ್ಸವ ಮೂರ್ತಿಯ ಮಹಾರುದ್ರಾಭಿಷೇಕ ಮತ್ತು ಪೂಜಾ ವಿಧಿವಿಧಾನಗಳು ನೆರವೇರಿಸಲಾಯಿತು, ಪಲ್ಲಕ್ಕಿ ಉತ್ಸವ ನಂತರ ಧರ್ಮ ಸಭೆಯಲ್ಲಿ ಶ್ರೀ ಪೀಠದ ಪ್ರಧಾನ ಧರ್ಮದರ್ಶಿಗಳಾದ ಶ್ರೀ ಬಿಸಿ ಉಮಾಪತಿ ರವರು ಮತ್ತು ಶ್ರೀ ಪೀಠದ ಆಡಳಿತ ಅಧಿಕಾರಿಗಳಾದ ಡಾ. ರಾಜಕುಮಾರ್ ರವರು, ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಅಧ್ಯಕ್ಷರಾದ ಶ್ರೀ ಸೋಮನಗೌಡ ಮಾಲಿ ಪಾಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಪರಮೇಶ್ ಪಟ್ಟಣಶೆಟ್ಟಿ, ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ವಸಂತ ಬಿ ಹುಲ್ಲತ್ತಿ, ರಾಜ್ಯ ಕಾರ್ಯಧ್ಯಕ್ಷರಾದ ಶ್ರೀಮತಿ ರಶ್ಮಿ ನಾಗರಾಜ್ ಕುಂಕೋದ್, ಲಕ್ಷ್ಮೇಶ್ವರ ತಾಲೂಕ ಅಧ್ಯಕ್ಷರಾದ ಶ್ರೀ ಮಾಗಡಿ ಮಂಜುನಾಥ್, ಸಮಾಜದ ಹಿರಿಯರಾದ ಶ್ರೀ ಹೊಳೆಸಿರಿಗೇರಿ ನಾಗನಗೌಡ್ರು, ಶ್ರೀ ಪೀಠದ ದಾಸೋಹ ಸಮಿತಿ ಅಧ್ಯಕ್ಷರಾದ ಜಿ. ಷಣ್ಮುಖಪ್ಪ, ಮೇಷ್ಟ್ರು ಕಾರ್ಯದರ್ಶಿಯಾದ ಶ್ರೀ ಎನ್. ಶಿವಾನಂದಪ್ಪ, ಉಪಾಧ್ಯಕ್ಷರು ಶ್ರೀ ರವಿಕುಮಾರ್ ಪೂಜಾರ್ ಬಾತಿ, ಶ್ರೀ ಎಸ್ ಚನ್ನಬಸಪ್ಪ ಡಿಸಿಸಿ ಬ್ಯಾಂಕ್ ಮ್ಯಾನೇಜರ್, ವಿಜಯನಗರ ಜಿಲ್ಲಾಧ್ಯಕ್ಷರಾದ ಶ್ರೀ ಪ್ರಕಾಶ್ ಪಾಟೀಲ್, ಹರಿಹರ ತಾಲೂಕ್ ಅಧ್ಯಕ್ಷರಾದ ಗುಳದಳ್ಳಿ ಶೇಖರಪ್ಪನವರು, ಮತ್ತು ಮನಗೂಳಿ ಗ್ರಾಮದ ಸದ್ಭಕ್ತರು, ಹಾಗೂ ಸಮಾಜ ಬಾಂಧವರು ಶ್ರೀ ಪೀಠದ ಸದ್ಭಕ್ತರು ಉಪಸಿತರಿದ್ದರು.
ಈ ಸಂದರ್ಭದಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ ಉಪಮೇಯರ್ ಯಾಗಿ ಆಯ್ಕೆಯಾದ ಶ್ರೀ ಸೋಗಿ ಶಾಂತಕುಮಾರ್ ರವರನ್ನು ಸನ್ಮಾನಿಸಲಾಯಿತು.