email: info@panchamasali.org | phone: (08192) 222008 / 224914 | Sri Peetha: 94819 27666

ವಿಶ್ವಪ್ರಸಿದ್ಧ ಪಟ್ಟದಕಲ್ಲು ಸ್ಮಾರಕದ ಆವರಣದಲ್ಲಿ ಯೋಗ ಮಹೋತ್ಸವವು ಯಶಸ್ವಿಯಾಗಿ ಜರುಗಿತು.
 
 

 

ವಿಜಯನಗರ  ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ, ವಿಶ್ವ ವಿಖ್ಯಾತ ಹಂಪಿಯಲ್ಲಿ ಯೋಗೋತ್ಸವಕ್ಕೆ ಚಾಲನೆ, ಹಂಪಿಯ ಶ್ರೀ ವಿಜಯ ವಿಠ್ಠಲ ದೇವಾಲಯದಲ್ಲಿ ಯೋಗೋತ್ಸವಕ್ಕೆ ಚಾಲನೆ, 

ವಿನಯ್ ಗುರೂಜಿ ಅವರಿಂದ ಚಾಲನೆ, ವಿಜಯನಗರ ಸಾಮ್ರಾಜ್ಯ ರಾಜ್ಯಭಾರವನ್ನು ಕಲಿಸಿದ ಸಾಮ್ರಾಜ್ಯ ವಚನಾನಂದರೆಂದ್ರೆ ಅಭಿನಯ ಬಸವಣ್ಣನವರು, ಅವರು ಏನೇ ಮಾಡಿದ್ರು, ಹೊಸದಿರ್ತದೆ

ಯೋಗ ನಮ್ಮನ್ನು ಸ್ವತಂತ್ರಗೊಳಿಸಲಿ, ಒಳ್ಳೆ, ಆರೋಗ್ಯವಿದ್ದರೆ ಸಾಕು  ಯೋಗದಿಂದ, ರೋಗ ಮುಕ್ತ ಮಾಡೋದಕ್ಕೆ ವಚನಾನಂದ ಶ್ರೀಗಳು ಜೀವನ ಮುಡಿಪಾಗಿಟ್ಟಿದ್ದಾರೆ

ಈ ಯೋಗದಿಂದ ಹಂಪಿ ಹಾಳು ಹಂಪಿಯಾಗಲ್ಲಾ, ಹೊಸ ಹಂಪಿ ಆಗುತ್ತದೆ ಶ್ರೀ ಕೃಷ್ಣದೇವರಾಯ ಹೇಗೆ ಹಂಪಿಗೆ ಫೇಮಸ್ಸೋ, ಹಂಪಿ ಇರೋವವರೆಗೆ ಆನಂದ್ ಸಿಂಗ್ ಅವರ ಹೆಸರು ಕೂಡ ಇರ್ತದೆ

ಹಂಪಿಯಲ್ಲಿ ಯೋಗ ವಿವಿ ಆಗಲಿ, ಮೂಲ ಉದ್ದೇಶ ಪೂರೈಕೆಯಾಗಲಿ ಯೋಗೋತ್ಸವದಲ್ಲಿ ಶ್ರೀ ವಿನಯ್ ಗುರೂಜಿ ಹೇಳಿಕೆ ಶ್ವಾಸಗುರು ಶ್ರೀ ವಚನಾನಂದ ಶ್ರೀ, ಪತಂಜಲಿ ಯೋಗ ಸಮಿತಿಯ

ಭವರ್ ಲಾಲ್ ಆರ್ಯ , ಸಚಿವ ಆನಂದ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಭಾಗಿ

ಏಪ್ರಿಲ್ 23 ಮತ್ತು 24, 2022 ರಂದು ಹರಕ್ಷೇತ್ರ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಯುವಕ ಯುವತಿಯರು ಪಾಲ್ಗೊಳ್ಳಲಿದ್ದಾರೆ. ನಮ್ಮ ಸಮುದಾಯದ ಯುವ ಜನತೆಗೆ ಉತ್ತಮ ಉದ್ಯೋಗಾವಕಾಶವನ್ನು ಒದಗಿಸಿಕೊಡುವುದು ಇಂದಿನ ತುರ್ತು ಅವಶ್ಯಕತೆಗಳಲ್ಲೊಂದು. ಈ ನಿಟ್ಟಿನಲ್ಲಿ ವೀರಶೈವ ಪಂಚಮಸಾಲಿ ಸಮುದಾಯದ ಜಗದ್ಗುರು ಪೀಠವಾದ ಹರಕ್ಷೇತ್ರ ಹರಿಹರದಲ್ಲಿ ಬೃಹತ್‌ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ತಮ್ಮದೇ ಆದ ನೂತನ ಉದ್ಯಮಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ಸಹಯೋಗದಲ್ಲಿ ಉದ್ಯಮಿಯಾಗು - ಉದ್ಯೋಗ ನೀಡು ಸಮಾವೇಶ ಏರ್ಪಡಿಸಲಾಗಿದೆ.

ಅಲ್ಲದೆ, ಇಂದಿನ ದಿನಮಾನಸದಲ್ಲಿ ಕೌಶಲ್ಯತೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಬಗ್ಗೆ ನಮ್ಮ ಸಮುದಾಯದಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ - ಕೌಶಲ್ಯ ಕೃಷಿ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನಿಮ್ಮನ್ನೆಲ್ಲಾ ಆತ್ಮೀಯವಾಗಿ ಸ್ವಾಗತಿಸಿದೆ

Back to Top