email: info@panchamasali.org | phone: (08192) 222008 / 224914 | Sri Peetha: 94819 27666

ಕೊಪ್ಪಳ ಗವಿಮಠದ ಜಗದ್ಗುರು ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು

ಹರಕ್ಷೇತ್ರ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಪಾದಾರ್ಪಣೆಗೈದು ಶ್ರೀಪೀಠದ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿ ಹರಸಿ ಹಾರೈಸಿದ ದಿವ್ಯಗಳಿಗೆ.

 

ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ತಾವರ್ ಚಂದ್ ಗೆಹ್ಲೋಟ್ ಅವರು ಹರ ಕ್ಷೇತ್ರ ಹರಿಹರ ದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಇಂದು ಭೇಟಿ ನೀಡಿದರು. ಕೆಲವು ದಿನಗಳ ಹಿಂದೆ ಅವರನ್ನು ಭೇಟಿಯಾಗುವ ಉದ್ದೇಶದಿಂದ ರಾಜಭವನಕ್ಕೆ ತೆರಳಿದ್ದ ಸಂದರ್ಭದಲ್ಲಿ ನಮ್ಮ ಯೋಗ ಸಾಧನೆ ಹಾಗೂ ಸಾಮಾಜಿಕ ಸುಧಾರಣೆಯ ಬಗ್ಗೆ ಸುಮಾರು ಎರಡು ಗಂಟೆಗಳ ಕಾಲ ವಿಸ್ತೃತವಾಗಿ ಚರ್ಚೆ ನಡೆಸುವ ಅವಕಾಶವನ್ನು ಅವರು ನೀಡಿದ್ದರು. ಈ ಸಂದರ್ಭದಲ್ಲಿ ಹರ ಕ್ಷೇತ್ರ ಹರಿಹರಕ್ಕೆ ಭೇಟಿ ನೀಡುವಂತೆ ಅವರಲ್ಲಿ ಮನವಿಯನ್ನು ಮಾಡಿದ್ದೇವು. ಈ ಮನವಿಯನ್ನು ಪುರಸ್ಕರಿಸಿದ ರಾಜ್ಯಪಾಲರು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಹರ ಕ್ಷೇತ್ರಕ್ಕೂ ಭೇಟಿ ನೀಡುವ ಮೂಲಕ ನಮ್ಮ ಮನವಿಗೆ ಸ್ಪಂದಿಸಿ ಪ್ರೀತಿ ಆದರಗಳಿಂದ ಗೌರವಿಸಿದ್ದು ಬಹಳ ಸಂತಸ ತಂದಿತು.

ಹರ ಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಆಗಮಿಸಿದಂತಹ ರಾಜ್ಯಪಾಲರು ಇಲ್ಲಿಯ ವಾತಾವರಣವನ್ನು ಕಂಡು ಬಹಳಷ್ಟು ಸಂತಸಪಟ್ಟರು. ಹರ ಕ್ಷೇತ್ರದಲ್ಲಿ ಸಕಾರಾತ್ಮಕ ವಾದಂತಹ ಶಕ್ತಿ ಕಂಡು ಬಂದಿದ್ದನ್ನ ಖುಷಿಯಿಂದ ಹಂಚಿಕೊಂಡರು. ಈ ಕ್ಷೇತ್ರದಲ್ಲಿ ಇರುವಂತಹ ವಾತಾವರಣ ಸಿಖ್ ಸಂಪ್ರದಾಯದ ಗುರುದ್ವಾರದಲ್ಲಿ ಕಂಡುಬರುವಂತಹ ವಾತಾವರಣ ವಾಗಿದೆ. ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಅನುಭವವನ್ನು ಹೊಂದಿರುವಂತಹ ಶ್ರೀ ವಚನಾನಂದ ಸ್ವಾಮೀಜಿ ಗಳು ತಮ್ಮ ಮುತುವರ್ಜಿಯಿಂದ ಕೈಗೊಂಡಿರುವಂತಹ ಕಾರ್ಯಕ್ರಮಗಳು ಶ್ರೀಪೀಠದ ಅಭಿವೃದ್ಧಿಗೆ ಕೈಗೊಂಡಿರುವಂತಹ ಕೆಲಸ-ಕಾರ್ಯಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮಠದ ಪರಂಪರೆಯ ಬಗ್ಗೆ ಇತಿಹಾಸದ ಬಗ್ಗೆ ಪಂಚಮಸಾಲಿ ಸಮಾಜದ ಬಹಳಷ್ಟು ವಿಚಾರಗಳ ಬಗ್ಗೆ ಚರ್ಚೆಯನ್ನು ನಡೆಸಲಾಯಿತು.

ಮಹಾಯೋಗಿನಿ ಅಕ್ಕಮಹಾದೇವಿ,ಕಿತ್ತೂರಿನ ರಾಣಿ ಚೆನ್ನಮ್ಮ ,ಕೆಳದಿ ರಾಣಿ ಚೆನ್ನಮ್ಮ,ಬೆಳವಡಿ ರಾಣಿ ಮಲ್ಲಮ್ಮ,ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಮೈಲಾರ ಮಹಾದೇವಪ್ಪ,ಅಕ್ಷರಯೋಗಿ ಅರಟಾಳ ರುದ್ರಗೌಡ,ಸರ್ ಕಂಬಳಿ ಸಿದ್ದಪ್ಪ,ಅದರಗುಂಚಿ ಶಂಕರಗೌಡ ಮುಂತಾದ ಮಹನೀಯರ ಬಗ್ಗೆ ಹಾಗೂ ಅವರ ಇತಿಹಾಸದ ಬಗ್ಗೆ ನಮ್ಮಿಂದ ಮಾಹಿತಿಯನ್ನು ಪಡೆದುಕೊಂಡು ರಾಜ್ಯಪಾಲರು ಪಂಚಮಸಾಲಿ ಸಮುದಾಯದ ವೀರ ಮಹಿಳೆಯರು ರಾಜ್ಯಕ್ಕೆ ನೀಡಿದಂತಹ ಕೊಡುಗೆಯನ್ನು ಶ್ಲಾಘಿಸಿದರು.

ನಮ್ಮ ಮನವಿಗೆ ಬೆಲೆಯನ್ನು ಕೊಟ್ಟು ತಮ್ಮ ಅಧಿಕೃತ ಕಾರ್ಯಕ್ರಮಗಳ ಮಧ್ಯೆ ಶ್ರೀಪೀಠಕ್ಕೆ ಭೇಟಿ ನೀಡಿದಂತಹ ರಾಜ್ಯಪಾಲರಿಗೆ ಮಹಾದೇವ ಉತ್ತಮ ಆಯುರಾರೋಗ್ಯವನ್ನು ನೀಡುವ ಮೂಲಕ ಇನ್ನಷ್ಟು ಸಮಾಜಸೇವೆಯನ್ನು ಮಾಡುವಂತಹ ಶಕ್ತಿಯನ್ನು ದಯಪಾಲಿಸಲಿ ಎನ್ನುವ ಹಾರೈಕೆ ನಮ್ಮದಾಗಿದೆ.

ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮೀಜಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ
ಹರ ಕ್ಷೇತ್ರ ಹರಿಹರ

ನಾಡಿನ ಅಕ್ಷರಯೋಗಿ.
ಉತ್ತರ ಕರ್ನಾಟಕದ ಶಿಕ್ಷಣ ದಾರಿದ್ರ್ಯವನ್ನು ತೊಲಗಿಸಿ ಶೈಕ್ಷಣಿಕ ಕ್ರಾಂತಿ ಮಾಡಿದ ಮಹಾನ್‌ಸುಧಾರಕ.
ಹೆಸರು ಅರಟಾಳ ರುದ್ರಗೌಡರು.

ಅರಟಾಳ ರುದ್ರಗೌಡರು ಧಾರವಾಡದಲ್ಲಿ ಕರ್ನಾಟಕ ಕಾಲೇಜು ಸ್ಥಾಪನೆ ಮಾಡಿದವರು. ಧಾರವಾಡ ಶಿಕ್ಷಣ ಕಾಶಿ ಎಂದು ಕರೆಸಿಕೊಳ್ಳುವಲ್ಲಿ ಅರಟಾಳ ರುದ್ರಗೌಡರ ಕೊಡುಗೆ ಅಪಾರವಾಗಿದೆ. ಅಷ್ಟೇ ಅಲ್ಲ ಉತ್ತರಕರ್ನಾಟಕ ಶಿಕ್ಷಣ ಸಂಸ್ಥೆಗಳ ಕೊರತೆಯಿಂದ ನಲುಗುತಿದ್ದಾಗ ಆ ಕೊರತೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಅರಟಾಳ ರುದ್ರಗೌಡರು. ಹೇಳಬೇಕೆಂದ್ರೆ ೧೯೧೦ರವರೆಗೆ ಉತ್ತರ ಕರ್ನಾಟಕದಲ್ಲಿ ಒಂದೇ ಒಂದು ಕಾಲೇಜು ಇರಲಿಲ್ಲ. ಇದನ್ನರಿತ ಅರಟಾಳ ರುದ್ರಗೌಡರು ಆಗಿನ ಬ್ರಿಟಿಷ್‌ಕಲೆಕ್ಟರುಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆಗ ಬ್ರಿಟಿಷ್‌ಕಲೆಕ್ಟರ್‌ಗಳು ಒಂದು ಷರತ್ತು ಹಾಕಿದ್ದರು. ಶಿಕ್ಷಣ ಸಂಸ್ಥೆ ಆರಂಭಿಸಲು ಮೂರು ಲಕ್ಷ ರೂಪಾಯಿ ಠೇವಣಿ ಇಡಬೇಕು ಅನ್ನೋದೆ ಆ ಷರತ್ತು. ಷರತ್ತನ್ನು ಸವಾಲಾಗಿ ಸ್ವೀಕರಿಸಿದ ಅರಟಾಳ ರುದ್ರಗೌಡರು ೧.೭೦ ಲಕ್ಷ ರೂಪಾಯಿ ಸಂಗ್ರಹಿಸಿ ಕಾಲೇಜನ್ನ ಆರಂಭ ಮಾಡಿದ್ದರು.
ಧಾರವಾಡದಲ್ಲಿ ಜೂನ್‌೨೦, ೧೯೧೭ರಲ್ಲಿ ಕರ್ನಾಟಕ ಕಾಲೇಜಿನ ಸ್ಥಾಪನೆ, ಉತ್ತರ ಕರ್ನಾಟಕದಲ್ಲಿ ಕರ್ನಾಟಕ ಸೆಂಟ್ರಲ್‌ಕೋಆಪರೇಟಿವ್ ಬ್ಯಾಂಕ್‌ಸ್ಥಾಪನೆ, ಬೆಳಗಾವಿಯಲ್ಲಿನ ಕೆ.ಎಲ್‌.ಇ ಸಂಸ್ಥೆ ಪ್ರಾರಂಭಕ್ಕೆ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿದರು. ಕೆ.ಎಲ್‌.ಇ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಗದಗಿನಲ್ಲಿ ತೋಂಟದಾರ್ಯ ಸಂಸ್ಕ್ರತ ಶಾಲೆ, 1883 ರಲ್ಲಿ ಧಾರವಾಡದಲ್ಲಿ ಲಿಂಗಾಯತ ಎಜುಕೇಶನ್ ಸಂಸ್ಥೆ, ಮಹಾರಾಷ್ಟ್ರದ ಕೋಲ್ಹಾಪುರ ಲಿಂಗಾಯತ ಎಜುಕೇಶನ್ ಸಂಸ್ಥೆ, ಮುಂಬೈನಲ್ಲಿ ಲಿಂಗಾಯತ ಮಠಕ್ಕೆ ನಿಧಿ ಸಂಗ್ರಹಣೆ, ಹಾವೇರಿಯ ಹಿರೆಕೇರೂರಿನಲ್ಲಿ ಇಂಗ್ಲಿಷ್ ಶಾಲೆ, ಬೆಳಗಾವಿಯ ಸರಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್‌ ತರಬೇತಿ ಕೆಂದ್ರ, ಹುಬ್ಬಳ್ಳಿಯಲ್ಲಿ ಲಿಂಗಾಯತ ವಿಲಾಸ ಮುದ್ರಣಾಲಯ, ಇವೆಲ್ಲವೂ ಅರಟಾಳ ರುದ್ರಗೌಡ್ರು ಕೊಡುಗೆಗಳಾಗಿವೆ.
ಇಂಥ ಶಿಕ್ಷಣ ಪ್ರೇಮಿ, ಶಿಕ್ಷಣ ಸುಧಾರಕ ಅರಟಾಳ ರುದ್ರಗೌಡರು ಜನಿಸಿದ್ದು ಮಾರ್ಚ್‌೨೨ ೧೮೫೧ರಲ್ಲಿ. ಹುಟ್ಟೂರು ಕುಂದಗೋಳ ತಾಲೂಕಿನ ಅರಟಾಳ ಗ್ರಾಮ.
ನಮ್ಮ ನಾಡಿಗೆ ಕೊಡುಗೆ ಕೊಟ್ಟ ಮಹನೀಯರನ್ನು ಸ್ಮರಿಸುವುದು ನಾಡಿನ ಎಲ್ಲ ಜನರ ಕರ್ತವ್ಯವೂ ಹೌದು.
ಜವಾಬ್ದಾರಿಯೂ ಹೌದು.

ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಕ್ಷೇತ್ರ ಹರಿಹರ.

Back to Top