email: [email protected] | phone: (08192) 222008 / 224914 | Sri Peetha: 94819 27666

 

ಪಂಚಮಸಾಲಿ 2ಎ ಮೀಸಲಿಗೆ ಮುಂದಡಿ ಇಟ್ಟ ಸರ್ಕಾರ; ಶೀಘ್ರದಲ್ಲೇ ಕುಲಶಾಸ್ತ್ರೀಯ ಅಧ್ಯಯನ ವರದಿ ಸಲ್ಲಿಕೆ

ಪಂಚಮಸಾಲಿ ಸಮುದಾಯದ ಬಹುದಿನದ ಬೇಡಿಕೆಯಾದ 2ಎ ಮೀಸಲಾತಿ ಶೀಘ್ರ ಈಡೇರುವ ಸಾಧ್ಯತೆ ಇದೆ. ಶೀಘ್ರದಲ್ಲೇ ಕುಲಶಾಸ್ತ್ರೀಯ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ಸಾಧ್ಯತೆ ಇದ್ದು, ನಂತರ ಸರ್ಕಾರ ಮುಂದಿನ ಪ್ರಕ್ರಿಯೆ ಆರಂಭಿಸುವ ನಿರೀಕ್ಷೆ ಮೂಡಿಸಿದೆ. ಈ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ವಚನಾನಂದ ಶ್ರೀಗಳ ನಡುವೆ ಮಹತ್ವದ ಸಭೆಯಾಗಿದೆ.

 
ಹೈಲೈಟ್ಸ್‌:
* ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಮುಂದಡಿ ಇಟ್ದ ಸರ್ಕಾರ
* ಶೀಘ್ರದಲ್ಲೇ ಕುಲಶಾಸ್ತ್ರೀಯ ಅಧ್ಯಯನ ವರದಿ ಸಲ್ಲಿಕೆ, ಸರ್ಕಾರದಿಂದ ಮುಂದಿನ ಕ್ರಮ ನಿರೀಕ್ಷೆ
* ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ವಚನಾನಂದ ಶ್ರೀಗಳ ಮಹತ್ವದ ಸಭೆ

ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲು ಬೇಡಿಕೆ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಸುತ್ತಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ವಿಧಾನ ಮಂಡಲ ಚಳಿಗಾಲದ ಅಧಿವೇಶನಕ್ಕೂ ಮೊದಲೇ ಈ ಕುರಿತ ವರದಿ ಸಲ್ಲಿಸುವ ಸಾಧ್ಯತೆಯಿದೆ. ನಂತರ ಸರಕಾರ ಮುಂದಿನ ಪ್ರಕ್ರಿಯೆ ಆರಂಭಿಸುವ ನಿರೀಕ್ಷೆ ಮೂಡಿದೆ.

ಆಯೋಗ ನಡೆಸುತ್ತಿರುವ ಕುಲಶಾಸ್ತ್ರೀಯ ಅಧ್ಯಯನ ಮುಕ್ತಾಯ ಹಂತದಲ್ಲಿದೆ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿರುವುದು ಇದಕ್ಕೆ ಪುಷ್ಠಿ ನೀಡುವಂತಿದೆ.

ಮಂಗಳವಾರ ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ನೇತೃತ್ವದ ನಿಯೋಗ ವಿಸ್ತೃತವಾಗಿ ಚರ್ಚೆ ನಡೆಸಿತು. ಈ ವೇಳೆ ಸಿಎಂ ಆಯೋಗ ವರದಿ ಸಲ್ಲಿಸುತ್ತಿದ್ದಂತೆ ಮುಂದಿನ ಕ್ರಮವನ್ನು ತ್ವರಿತವಾಗಿ ಕೈಗೊಳ್ಳುವ ಭರವಸೆ ನೀಡಿದ್ದರು. ಇದರ ಮಧ್ಯೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೊಂದಿಗೂ ಸರಕಾರ ಚರ್ಚಿಸಿದೆ. ಕುಲಶಾಸ್ತ್ರೀಯ ಅಧ್ಯಯನ ಪ್ರಕ್ರಿಯೆ ಬಹುತೇಕ ಪೂರ್ಣಗೊಳ್ಳಲಿರುವುದಾಗಿ ಆಯೋಗವು ಸರಕಾರಕ್ಕೆ ತಿಳಿಸಿದೆ ಎಂದು ಹೇಳಲಾಗಿದೆ.

''ಪಂಚಮಸಾಲಿ ಸಮುದಾಯವನ್ನು ಪ್ರವರ್ಗ- 2ಎಗೆ ಸೇರ್ಪಡೆ ಹಾಗೂ ಅಖಂಡ ವೀರಶೈವ ಲಿಂಗಾಯಿತರನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಬೇಕೆಂಬ ವಿಚಾರವಾಗಿ ವಿಶೇಷ ಸಭೆ ನಡೆಸಲಾಗಿದೆ. ಕಾನೂನಿನ ಅರಿವಿನ ಕಾರಣಕ್ಕೆ ನಾವು ಸರಕಾರಕ್ಕೆ ಗಡುವು ನೀಡಿಲ್ಲ. ಸಿಎಂ ಶೀಘ್ರವೇ ಮೀಸಲು ವಿಚಾರವಾಗಿ ಘೋಷಿಸಬೇಕು. ಇದಕ್ಕಾಗಿ ಮತ್ತೊಬ್ಬ ಸಿಎಂ ಬರುವ ಅವಶ್ಯಕತೆಯಿಲ್ಲ. ಮೂಗಿಗೆ ತುಪ್ಪ ಸವರುವ ಕೆಲಸ ಬೇಡ,'' ಎಂದು ಸಿಎಂ ಭೇಟಿ ಬಳಿಕ ಮಾತನಾಡಿದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

''ಇತ್ತೀಚೆಗೆ ನಡೆದ ಶಿಕ್ಷಕರ ನೇಮಕಾತಿಯಲ್ಲಿ ಪ್ರವರ್ಗ 2ಎ ಮೀಸಲು ಇಲ್ಲದ ಕಾರಣ ಸಮುದಾಯದ ಯಾರೊಬ್ಬರು ನೇಮಕವಾಗದೆ ಅನ್ಯಾಯವಾಗಿದೆ. ಹಾಗಾಗಿ ಮೀಸಲು ನೀಡಿ ಎಂದು ನಿರಂತವಾಗಿ ಮನವಿ ಮಾಡುತ್ತಲೇ ಇದ್ದೇವೆ. ಇದು ಕೊನೆಯ ಮನವಿ. ಮೀಸಲಾತಿ ನೀಡಿದರೆ ನಿಮಗೆ ಹಾಲು, ತುಪ್ಪದಲ್ಲಿಅಭಿಷೇಕ ಮಾಡುತ್ತೇವೆ. ನಮಗೆ ನೀವೇ ಸಾಕ್ಷಾತ್‌ ಬಸವಣ್ಣ,'' ಎಂದಿದ್ದಾರೆ.

''ಮೀಸಲು ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ವಿರುದ್ಧ ಕೆಲವರು ಅಪಪ್ರಚಾರ ಮಾಡುತ್ತಿದ್ದು, ಜೋಕರ್‌ಗಳು, ಕಾಮಿಡಿಮನ್‌ಗಳು ಹುಟ್ಟುಕೊಂಡಿದ್ದಾರೆ. ನಾವು ಸರಕಾರದ ಪರವಾಗಿದ್ದೇವೆ, ಮುಖ್ಯಮಂತ್ರಿಗಳೊಂದಿಗೆ ಒಳಒಪ್ಪಂದವಿದೆ ಎಂದು ಮಾತುಗಳಿದ್ದು, ಇದಕ್ಕೆಲ್ಲಾ ಅವಕಾಶ ನೀಡಬಾರದು. 1994ರಿಂದ ನಡೆದಿರುವ ಹೋರಾಟಕ್ಕೆ ಸ್ಪಂದಿಸಿ ಮೀಸಲಾತಿ ನೀಡಬೇಕು. ಇದರಲ್ಲಿರಾಜಿ ಬೇಡ,'' ಎಂದು ತಿಳಿಸಿದರು.

ಕಾನೂನು ಬದ್ಧ ಪ್ರಕ್ರಿಯೆ
ಇದೇ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ''ಪಂಚಮಸಾಲಿಗಳಿಗೆ ಮೀಸಲು ನೀಡುವ ವಿಷಯದಲ್ಲಿಆಗುತ್ತಿರುವ ಒಳ್ಳೆಯ ಬೆಳವಣಿಗೆಗಳಿಗೆ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಕಾರಣ.ಅವರು ಸಂಪುಟ ಉಪ ಸಮಿತಿ ರಚಿಸಿದ್ದರಿಂದ ಪ್ರಕ್ರಿಯೆ ಇಲ್ಲಿಯವರೆಗೆ ಬಂದು ನಿಂತಿದೆ. ಇದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರು ಅಗತ್ಯ ತಿದ್ದುಪಡಿ ಮೂಲಕ ಹಿಂದುಳಿದ ವರ್ಗಗಳ ಆಯೋಗಕ್ಕೆ ಹೆಚ್ಚು ಅಧಿಕಾರ ನೀಡಿದರು. ಅದರಂತೆ ಸಮುದಾಯದ ಬೇಡಿಕೆಯನ್ನು ಆಯೋಗಕ್ಕೆ ಶಿಫಾರಸು ಮಾಡಲಾಗಿದ್ದು, ಆಯೋಗ ಕುಲಶಾಸ್ತ್ರೀಯ ಅಧ್ಯಯನ ಆರಂಭಿಸಿ ಮುಗಿಯುವ ಹಂತಕ್ಕೆ ಬಂದಿದೆ. ನಮ್ಮ ನಿರ್ಧಾರ ಸಂವಿಧಾನದ ಚೌಕಟ್ಟಿನೊಳಗೆ, ಕಾನೂನು ಬದ್ಧವಾಗಿರಬೇಕಾಗುತ್ತದೆ,'' ಎಂದು ಹೇಳಿದರು.

''ಶೀಘ್ರವಾಗಿ ವರದಿ ನೀಡುವಂತೆ ಆಯೋಗಕ್ಕೆ ಸೂಚಿಸಲಾಗಿದ್ದು, ವರದಿ ಪಡೆದು ಸಂಪುಟದಲ್ಲಿ ತೀರ್ಮಾನಿಸಿ ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುತ್ತೇವೆ. ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆ ವಿಚಾರವೂ ಸೇರಿದಂತೆ ಆಯೋಗವು ಸಮಗ್ರ ವರದಿ ನೀಡುವ ಸಾಧ್ಯತೆ ಇದೆ. ವರದಿ ಸಲ್ಲಿಕೆಯಾದ ನಂತರ ಸಂಬಂಧಪಟ್ಟ ಎಲ್ಲರೊಂದಿಗೆ ಚರ್ಚಿಸಿ ನ್ಯಾಯ ಕೊಡಿಸುವ ಕೆಲಸ ಮಾಡಲಾಗುವುದು,'' ಎಂದು ಹೇಳಿದರು.

 

 ವಚನಾನಂದ ಶ್ರೀಗಳ ಆಗ್ರಹ।। ಉಪ ಜಾತಿ ಕಾಲಂನಲ್ಲಿ ಪಂಚಮಸಾಲಿ ನಮೂದಿಗೆ  ಜಾಗೃತಿ 

ಓಬಿಸಿ ಶಿಫಾರಸ್ಸಿಗೆ ಆಗ್ರಹ :  ಕೇಂದ್ರದ ಓಬಿಸಿ ಮೀಸಲಾತಿ ಅಂತಿಮ ಹಂತಕ್ಕೆ ಬಂದಿದೆ. ಸುಮಾರು 900 ಪುಟಗಳ     ದಾಖಲಾತಿಗಳನ್ನು ಕೇಂದ್ರದ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಲ್ಲಿಸಿದ್ದು ಆಯೋಗವು ರಾಜ್ಯ ಸರಕಾರಕ್ಕೆ ವರ್ಗಾವಣೆ ಮಾಡಿದೆ. ರಾಜ' ಸರಕಾರವು ಕೇಂದ್ರ ಸರಕಾರಕ್ಕೆ   ಶಿಫಾರಸ್ಸು ಮಾಡಬೇಕಿದೆ. ಕೇಂದ್ರದಲ್ಲಿ ಅನುಮೋದನೆ ಆದರೆ ನಮಗೆ ಶೇ.27 ರಷ್ಟುಮೀಸಲಾತಿ ಲಭಿಸಲಿದೆ ಎಂದು ವಚನಾನಂದ ಶ್ರೀಗಳು    ಹೇಳಿದರು.   

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಈ ಸರಕಾರ 2ಎ ಮೀಸಲಾತಿ ಕೊಟ್ಟೇ ಕೊಡುತ್ತದೆ ಎಂದು ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು. 

ದಿನಾಂಕ 06-11-2022ರ ಭಾನುವಾರ ರಂದು ಚಿತ್ರದುರ್ಗದ ನಗರದ. ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ. ಮಾತನಾಡಿ, ಪಂಚಮಸಾಲಿಗಳಿಗೆ ರಾಜ್ಯ ಸರಕಾರದಲ್ಲಿ 2ಎ ಮೀಸಲಾತಿ, ಕೇಂದ್ರ ಸರಕಾರದಲ್ಲಿ ಓಬಿಸಿ ಮೀಸಲಾತಿಗಾಗಿ ಆಗ್ರಹಿಸಿ ಕಳೆದ 28 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. 2009ರಲ್ಲಿ ಬಿ. ಎಸ್.ಯಡಿಯೂರಪ್ಪಅವರು ಪಂಚಮಸಾಲಿಸಮಾಜವನ್ನು ಜಾತಿ ಪಟ್ಟಿಯಲ್ಲಿಸೇರಿಸಿ, ಗೆಜೆಟ್ ನೋಟಿಫಿಕೇಷನ್ ಮಾಡಿ,

ಸಾಮಾನ್ಯ ವರ್ಗದಿಂದ 3ಬಿ ಗೆ ಸೇರಿಸಿದ್ದರು. ಆಗಲೇ ನಮಗೆ 2ಎಮೀಸಲಾತಿ ಸಿಗಬೇಕಿತ್ತು. ಈಗ ಬಸವರಾಜ ಬೊಮ್ಮಾಯಿ ಸರಕಾರ ಕುಲಶಾಸ್ತ್ರೀಯ ಅಧ್ಯಯನಕ್ಕೆ ಒಳಪಡಿಸಿದ್ದು ಈಗಾಗಲೇ ರಾಜ್ಯದ 18 ಜಿಲ್ಲೆಗಳಲ್ಲಿ ಕುಲಶಾಸ್ತ್ರೀಯ ಅಧ್ಯಯನ ಆಗಿದೆ ಎಂದರು. 

ಪಂಚಮಸಾಲಿ ಜನಜಾಗೃತಿ:  

ರಾಜ್ಯ ಸರಕಾರದ ಜಾತಿ ಪಟ್ಟಿಯಲ್ಲಿ 3ಬಿ ಯಲ್ಲಿ ಲಿಂಗಾಯತ, ವೀರಶೈವ, ಪಂಚಮಸಾಲಿಯ 19  ಉಪಜಾತಿಗಳಿವೆ. ಇವರೆಲ್ಲರೂ ಆದಾಯ, ಜಾತಿ ಪ್ರಮಾಣ ಪತ್ರ ಪಡೆಯುವಾಗ ಉಪಜಾತಿ ಕಾಲಂನಲ್ಲಿ ಪಂಚಮಸಾಲಿ ಎಂಬುದಾಗಿ ನಮೂದಿಸಬೇಕು. ಇದರಿಂದ 2ಎ ಮೀಸಲಾತಿ. ಸಿಕ್ಕಾಗ ನಿಜವಾದ ಪಂಚಮಸಾಲಿಗಳಿಗೆ ಅನ್ಯಾಯ ಆಗಲ್ಲ ಎಂದು ಸಮುದಾಯದವರನ್ನು ಎಚ್ಚರಿಸಿದರು. ಈ ಬಗ್ಗೆ ರಾಜ್ಯದಾದ್ಯಂತ ಪ್ರವಾಸ ಮಾಡಿ ಸಮುದಾಯದವರಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

 

ಉನ್ನತ: ಹುದ್ದೆಗಳಿಂದ ವಂಚಿತ:  

ನಮ್ಮ ಸಮುದಾಯದಲ್ಲಿ ಬೆರಳೆಣಿಕೆಯಷ್ಟು ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ. ಓಬಿಸಿ ಮೀಸಲಾತಿ ಲಭಿಸಿದರೆ  ಉನ್ನತ ಮಟ್ಟದ ಅಧಿಕಾರಿಗಳ ಸಂಖ್ಯೆ ಹೆಚ್ಚಲಿದೆ. ನಮ್ಮ ಸಮೀಕ್ಷೆ ಪ್ರಕಾರ ಸಮುದಾಯದಲ್ಲಿ ಕೆಲವರು ಒಂದೆರೆಡು  ಅಂಕಗಳಿAದ ಉನ್ನತ ಮಟ್ಟದ ಹುದ್ದೆಗಳ

ಪಡೆದುಕೊಳ್ಳುವ: ವಂಚಿತರಾಗಿದ್ದಾರೆ. ಹಾಗಾಗಿ `ನಮಗೆ ಮೀಸಲಾತಿ ಅವಶ್ಯಕತೆಯಿದೆ ಎಂದು ತಿಳಿಸಿದರು. ರಾಜ್ಯದ ಬಹುಸಂಖ್ಯಾತರಿರುವ  ನಾವುಗಳು ಆರ್ಥಿಕವಾಗ್ಯಿ, ಶೆ ಶೈಕ್ಷಣಿಕವಾಗಿ

ಹಿಂದುಳಿದಿದ್ದೇವೆ. ನಮ್ಮ ಮಕ್ಕಳು ಪ್ರತಿಭಾವಂತರಿದ್ದರೂ ಪ್ರೋತ್ಸಾಹ ಸಿಗದ ಕಾರಣ ಉನ್ನತ ಹುದ್ದೆಗಳಿಂದ ವಂಚಿತರಾಗುತ್ತಿದ್ದಾರೆ. ಎಸ್ಸಿ ಎಸ್‌ಟಿ ಸಮುದಾಯದವರಿಗೆ ಮೀಸಲಾತಿ

ಹೆಚ್ಚನ ಮಾಡಿರುವುದನ್ನು ನಾವು  ಸ್ವಾಗತಿಸುತ್ತೇವೆ. ಅದೇ ರಿಚಿ ಕುಲಶಾಸ್ತ್ರೀಯ ಆಧ್ಯಯನ ನಡೆಸಿ ಅತೀ ಶೀಘ್ರದಲ್ಲಿ ನಮಗೂ 2ಎ, ಓಬಿಸಿ ಮೀಸಲಾತಿ ಒದಗಿಸಬೇಕು. ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಪಂಚಮಸಾಲಿ ಸಂಘದ ಜಿಲ್ಲಾಧ್ಯಕ್ಷ  ಜೆ.ಶಿವಪ್ರಕಾಶ್, ಜಿಲ್ಲಾಧ್ಯಕ್ಷೆ ಉಮಾ ರಮೇಶ್, ಖಜಾಂಚಿ ಜೆ.ಎ. ಮಂಜುಳಾ, ತಾಲೂಕು ಅಧ್ಯಕ್ಷ ಬಸವರಾಜ್, ಮುಖಂಡರಾದ.

ವಿಶ್ವನಾಥ್, ಕರಿಬಸಪ್ಪ ನರೇಂದ್ರಬಾಬು, ಜಿ.ಎಂ.ಪ್ರಕಾಶ್ ಮತ್ತಿತರರಿದ್ದರು. 

 

 

 

 
ಮೀಸಲಾತಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಕೇಂದ್ರ ಸರ್ಕಾರದ ಓ.ಬಿ.ಸಿ ಮತ್ತು ರಾಜ್ಯ ಸರ್ಕಾರದ 2ಎ ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ಕಾನೂನಾತ್ಮಕವಾಗಿ ನಾವಿಟ್ಟ ಹೆಜ್ಜೆಗಳು,ನಮ್ಮ ಮುಂದಿರುವ ಸವಾಲುಗಳು ಹಾಗೂ ನಾವು ಮುಂದೆ ಮಾಡಲೇಬೇಕಾದ ರೂಪರೇಷಗಳು ಹಾಗೂ ಜಿಲ್ಲಾಧ್ಯಂತ ಮೀಸಲಾತಿ ಜನ ಜಾಗೃತಿ ಯಾತ್ರೆ ಕುರಿತು ಹಾವೇರಿಯಲ್ಲಿ ಶ್ರೀ ಮಹೇಶ್ ಹಾವೇರಿ ಅವರ ವಾಣಿಜ್ಯ ಸಂಕೀರ್ಣದಲ್ಲಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನಿದ್ಯದಲ್ಲಿ ಜಿಲ್ಲಾಧ್ಯಕ್ಷ ಶ್ರೀ ನಾಗೇಂದ್ರ ಕಡಕೋಳರವರು ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರು ಶ್ರೀ ವಿರೇಶ ಮತ್ತಿಹಳ್ಳಿಯವರ ಉಪಸ್ಥಿತಿಯಲ್ಲಿ ಹಾಗೂ ಪೀಠದ ಧರ್ಮದರ್ಶಿಗಳಾದ ಶ್ರೀ ಪಿ ಡಿ ಶಿರೂರರವರು,ಶ್ರೀ ಮಹೇಶ ಹಾವೇರಿಯವರು, ಹಾವೇರಿ ಜಿಲ್ಲೆಯ ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರುಗಳು,ಪದಾಧಿಕಾರಿಗಳು ಹಾಗೂ ಸದ್ಭಕ್ತರು ಉಪಸ್ಥಿತಿಯಲ್ಲಿ ಸಭೆ ನಡೆಯಿತು.ಇದೇ ಸಂಧರ್ಭದಲ್ಲಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು ಮಾಧ್ಯಮಗೊಷ್ಠಿ ನಡೆಸಿದರು.
Back to Top