email: [email protected] | phone: (08192) 222008 / 224914 | Sri Peetha: 94819 27666

 
ಮೀಸಲಾತಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಕೇಂದ್ರ ಸರ್ಕಾರದ ಓ.ಬಿ.ಸಿ ಮತ್ತು ರಾಜ್ಯ ಸರ್ಕಾರದ 2ಎ ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ಕಾನೂನಾತ್ಮಕವಾಗಿ ನಾವಿಟ್ಟ ಹೆಜ್ಜೆಗಳು,ನಮ್ಮ ಮುಂದಿರುವ ಸವಾಲುಗಳು ಹಾಗೂ ನಾವು ಮುಂದೆ ಮಾಡಲೇಬೇಕಾದ ರೂಪರೇಷಗಳು ಹಾಗೂ ಜಿಲ್ಲಾಧ್ಯಂತ ಮೀಸಲಾತಿ ಜನ ಜಾಗೃತಿ ಯಾತ್ರೆ ಕುರಿತು ಹಾವೇರಿಯಲ್ಲಿ ಶ್ರೀ ಮಹೇಶ್ ಹಾವೇರಿ ಅವರ ವಾಣಿಜ್ಯ ಸಂಕೀರ್ಣದಲ್ಲಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನಿದ್ಯದಲ್ಲಿ ಜಿಲ್ಲಾಧ್ಯಕ್ಷ ಶ್ರೀ ನಾಗೇಂದ್ರ ಕಡಕೋಳರವರು ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರು ಶ್ರೀ ವಿರೇಶ ಮತ್ತಿಹಳ್ಳಿಯವರ ಉಪಸ್ಥಿತಿಯಲ್ಲಿ ಹಾಗೂ ಪೀಠದ ಧರ್ಮದರ್ಶಿಗಳಾದ ಶ್ರೀ ಪಿ ಡಿ ಶಿರೂರರವರು,ಶ್ರೀ ಮಹೇಶ ಹಾವೇರಿಯವರು, ಹಾವೇರಿ ಜಿಲ್ಲೆಯ ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರುಗಳು,ಪದಾಧಿಕಾರಿಗಳು ಹಾಗೂ ಸದ್ಭಕ್ತರು ಉಪಸ್ಥಿತಿಯಲ್ಲಿ ಸಭೆ ನಡೆಯಿತು.ಇದೇ ಸಂಧರ್ಭದಲ್ಲಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು ಮಾಧ್ಯಮಗೊಷ್ಠಿ ನಡೆಸಿದರು.

ಮುಂಡರಗಿ  ತಾಲೂಕಿನಲ್ಲಿ  ವಚನಾನಂದ ಶ್ರೀಗಳ ನಡೆ ಹಳ್ಳಿಕಡೆ ಕಾರ್ಯಕ್ರಮ

* ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆನ್ನುವುದು ಬಹು ವರ್ಷಗಳ ಬೇಡಿಕೆಯಾಗಿದ್ದು ಅದು ಇದೀಗ ಒಂದು. ಅಂತಿಮ ಹಂತಕ್ಕೆ ಬಂದು ತಲುಪಿದೆ.

* ಈಗಾಗಲೇ ಕುಲಶಾಸ್ತ್ರ ಅಧ್ಯಯನ. ಪ್ರಕ್ರಿಯೆ ಪ್ರಾರಂಭಿಸಿದ್ದು ಶೀಘ್ರದಲ್ಲಿಯೇ ಮುಕ್ತಾಯಗೊಳ್ಳಲಿದೆ.

* ಸರ್ಕಾರ ನಮ್ಮ ಸಮಾಜಕ್ಕೆ 2ಎ ಮೀಸಲಾತಿ. ಘೋಷಿಸುವುದು ಶತಸಿದ್ಧ.

ದಿನಾಂಕ ೨೯-೧೧-೨೦೨೨ರಂದು ಗದಗ ಜಿಲ್ಲಾ ಮುಂಡರಗಿ ನಮ್ಮ ಮಕ್ಕಳು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳ ಬೇಕಾದರೆ ನಮಗೆ ಮೀಸಲಾತಿ ಜೀಕೆ ಬೇಕು. ಮೀಸಲಾತಿ ನಮ್ಮ ಹಕ್ಕು. ಆದ್ದರಿಂದ ಪಂಚಮಸಾಲಿ ಸಮಾಜ ಬಾಂಧವರು 2ಎ 'ಮೀಸಲಾತಿ ಪಡೆದುಕೊಳ್ಳುವುದು ಅವಶ್ಯವಾಗಿದ್ದು, ಮೀಸಲಾತಿ ಜನಜಾಗೃತಿಗಾಗಿ ಶ್ರೀಗಳ ನಡೆ "ಹಳ್ಳಿಕಡೆ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಂದು ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ ಹೇಳಿದರು. 

ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ನಾಗಪ್ಪ ಮಜ್ಜಗಿ ಅವರ ಮನೆಯಿಂದ 2ಎ ಮೀಸಲಾತಿಗಾಗಿ ವಚನಾನಂದ ಶ್ರೀಗಳ ನಡೆ ಹಳ್ಳಿಕಡೆ ಕಾರ್ಯಕ್ರಮ ಪ್ರಾರಂಭಿಸಿ ಮಾತನಾಡಿದರು. 

ಇಂದು ಎಲ್ಲ ಉದ್ಯೋಗ ಅವಕಾಶಗಳಿಗೂ ಹೆಚ್ಚು ಬೇಡಿಕೆಗಳಿದ್ದು, ಸಾಮಾನ್ಯ ವರ್ಗಕ್ಕೆಹೆಚ್ಚಿನಸೌಲಭ್ಯಗಳು' ದೊರೆಯುವುದು ಅತ್ಯಂತ ವಿರಳ. ಹೀಗಾಗಿ ಪಂಚಮಸಾಲಿ ಸಮಾಜಕ್ಕೆ ಸರ್ಕಾರ 2ಎ ಮೀಸಲಾತಿ ನೀಡಿದರೆ. ಮುಂಬರುವ ದಿನಗಳಲ್ಲಿ ಮಕ್ಕಳಿಗೆ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಹೆಚ್ಚು ಅನುಕೂಲವಾಗಲಿದೆ. ಈಗಾಗಲೇ  ಲಿಂಗಾಯತ ಒಳಪಂಗಡಗಳಲ್ಲಿಕೆಲವರು ಈ 2ಎ ಮೀಸಲಾತಿ ಸೌಲಭ್ಯಗಳನ್ನು ಪಡೆದುಕೊಳ್ಳು್ತಿದ್ದಾರೆ. 

ಪಂಚಮಸಾಲಿ " ಸಮಾಜಕ್ಕೆ 2ಎ ಮಿಸಲಾತಿ ನೀಡಬೇಕೆನ್ನುವುದುಬಹುವಪನಗಳಬೇಡಿಕೆಯಾಗಿದ್ದು,  ಅದು ಇದಿ 01 ಒಂದು ಅಂತಿಮ ಹಂತಕ್ಕೆ ಬಂದೆ. ತಲುಪಿದ್ದು, ಈಗಾಗಲೇ ಕುಲಶಾಸ್ತ್ರ ಅಧ್ಯಯನ

ಪ್ರಕ್ರಿಯೆ" ಪ್ರಾರಂಭಿಸಿದ್ದು... ಶೀಘ್ರದಲ್ಲಿಯೇ  ಮುಕ್ತಾಯಗೊಳ್ಳಲಿದೆ. ಹೀಗಾಗಿ ಸರ್ಕಾರ  ಸಮಾಜಕ್ಕೆ 2ಎ ಮೀಸಲಾತಿ ಘೋಷಿಸುವುದು ಶತಸಿದ್ಧ. ಆದರಿಂದ ಮೀಸಲಾತಿ ಬರುವ ಪೂರ್ವದಲ್ಲಿ 3ಬಿ ಯಲ್ಲಿರುವ ಎಲ್ಲ ಪಂಚಮಸಾಲಿಗಳು ಜಾತಿ ಪ್ರಮಾಣ ಪತ್ರದ ಖಾಲಂ ನಂಬರ್‌ 19ರಲ್ಲಿ ಪಂಚಮಸಾಲಿ ಹಾಗೂ ಉಪಜಾತಿ ಖಾಲಂ ನಲ್ಲಿ ಪಂಚಮಸಾಲಿ ಎಂದು ಬರೆಸಬೇಕು. ಈಗಿನಿಂದಲೇ ಪಂಚಮಸಾಲಿ  ಎಂದು ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳಬೇಕು. ಅಂದಾಗ ಮುಂದೆ 2ಎ ಮೀಸಲಾತಿ ಪಡೆದುಕೊಳ್ಳಲು ಅನುಕೂಲವಾಗುತ್ತದೆ. 

 ಇಂತಹ ಅನೇಕ ವಿಷಯಗಳನ್ನು ಪಂಚಮಸಾಲಿ ಸಮಾಜ ಬಾಂಧವರಿಗೆ ತಿಳಿಸುವುದಕ್ಕುಗಿ ಶ್ರೀಗಳ ನಡೆ  ಹಳ್ಳಿಕಡೆ ಎನ್ನುವ ಜನಜಾಗೃತಿ ಯಾತ್ರೆ 'ಹಮ್ಮಿಕೊಳ್ಳಲಾಗಿದ್ದು ಮುಂದೆ ಜಿಲ್ಲೆಯ ಎಲ್ಲತಾಲೂಕುಗಳ ಭೇಟಿ  ಮುಗಿದ. ನಂತರ ಜಿಲ್ಲೆಯಲ್ಲಿಯೇ ಒಂದು ಕಡೆಗೆ ಬೃಹತ್‌ ಸಮಾವೇಶ ನಡೆಸುವ ಮೂಲಕ  ಸಮಾಜಕ್ಕೆ ಮೀಸಲಾತಿ ಏಕೆ ಕೊಡಬೇಕು?, ಕೊಟ್ಟರೆ ಸರ್ಕಾರಕ್ಕೆ ಏನು ಲಾಭ?, ಪಡೆದುಕೊಂಡರೆ ನಮ್ಮ ಸಮಾಜಕ್ಕೆ ಏನು ಲಾಭ? ಎನ್ನುವ ಕುರಿತು. ಸರ್ಕಾರಕ್ಕೆ ನಾವು ತಿಳಿಸಬೇಕಾಗಿದೆ. ಅದನ್ನು. ವಿವರವಾಗಿ ತಿಳಿಸುವು ದಕ್ಮಾಗಿಯೇ ಸಮಾವೇಶ... ಆಯೋಜಿಸುವುದಾಗಿ. ತಿಳಿಸಿದರು.

ಸಮಾಜದ ಯುವ ಮುಖಂಡ ರಜನಿಕಾಂತ ದೇಸಾಯಿ, ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಎಸ್‌.ವಿ. ಪಾಟೀಲ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ.  ಬೇಡಿಕೆ ಇಂದು ನಿನ್ನೆಯದಲ್ಲ. ಅದು ಇದೀಗ ಅಂತಿಮ ಹಂತಕ್ಕೆ ಬಂದು ತಲುಪತ್ರಿದೆ. ಮೀಸಲಾತಿ ಕುರಿತು ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ  ಶ್ರೀಗಳ ನಡೆ ಹಳ್ಳಿಕಡೆ ಎನ್ನುವಕಾರ್ಯಕ್ರಮದ ಮೂಲಕ ವಚನಾಂದ ಶ್ರೀಗಳೇ “ಭಕ್ತರ ಮನೆಗೆ ಆಗಮಿಸಿ  ಮೀಸಲಾತಿ. ಕುರಿತು... ಜನರಲ್ಲಿ ತಿಳುವಳಿಕೆ ಮೂಡಿಸುತ್ತಿರುವ. ಕಾರ್ಯ ಶ್ಲಾಘನೀಯ.  ಪಂಚಮಸಾಲಿ ಸಮಾಜ ಬಾಂಧವರಾದ ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಕೂಡುವ ಮೂಲಕ ಶ್ರೀಗಳ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು.  ಪಂಚಮಸಾಲಿ 'ಸಮಾಜದ ರಾಜ್ಯ ಯುವ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮುಧೋಳ, ಯುವ ಮುಖಂಡ ವೀರಣ್ಣ ಮಜ್ಜಗಿ ಮಾತನಾಡಿ, 2ಎ. ಮೀಸಲಾತಿಗಾಗಿ. ನಾವೆಲ್ಲರೂ... ಕಂಕಣಬದ್ದರಾಗಿ ಒಗ್ಗಟ್ಟಿನಿಂದ ಹೋರಾಡುವುದು ಅವಶ್ಯವಾಗಿದೆ.  ಹರಿಹರ ಪೀಠದ ಪಂಚಮಸಾಲಿ ಶ್ರೀಗಳು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದು. ತಾಲೂಕಿನಲ್ಲಿ ಶನಿವಾರದಿಂದ 3 ದಿನಗಳ ಕಾಲ ವಿವಿಧ ಗ್ರಾಮಕ್ಕೆ ಭೇಟಿ ನೀಡಿ ಸಮಾಜ ಬಾಂಧವರಿಗೆ 2ಎ ಮೀಸಲಾತಿ ಉರಿತು ಜನಜಾಗೃತಿ ಮೂಡಿಸಲಿದ್ದಾರೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ 'ಯಶಸ್ವಿಗೊಳಿಸಬೇಕು ಎಂದರು.  

ಈ ಸಂದರ್ಭದಲ್ಲಿ ಹಿರಿಯರಾದ ನಾಗಪ್ಪ ಮಜ್ಜಗಿ, ಅಶೋಕ ಹಂದ್ರಾಳ, ಸೋಮಶೇಖ ' ಹಕ್ಕಂಡಿ, ಸಿದ್ದಲಿಂಗಪ್ಪ ದೇಸಾಯಿ, ಮಹೇಶ ಜಂತ್ಲಿ ನಾಗೇಶ ಹುಬ್ಬಳಿ, ರವೀಂದ್ರಗೌಡ ಪಾಟೀಲ, ಪ್ರಶಾಂತಗೌಡ  ಗುಡದಪ್ಪನವರ, ಮೋಹನ್‌ ದೇಸಾಯಿ, ದೇವಪ್ಪ ಇಟಗಿ, ಮಹಾದೇವಪ್ಪ. ಗುಡ್ಡಾನೂರ, ವಿಜಯೇಂದ್ರಗೌಡ ಪಾಟೀಲ, ಈರಣ್ಣ ಬಚೇನಹಳ್ಳಿ, ನವೀನ ಪಾಟೀಲ, ಬಸಣ್ಣ ಗುಡ್ಡಾನೂರ, ಮಲ್ಲಣ್ಣ ಪ್ಯಾಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

 ಕೃಪೆ : ಕನ್ನಡಪ್ರಭ

ವೀರಶೈವ ಲಿಂಗಾಯತರಿಗೆ 2 ಎ ಮೀಸಲಾತಿ ಸಿಗಬೇಕೆಂದು ಎಂಬುದು ಇಂದು ನಿನ್ನೆಯ ಹೋರಾಟವಲ್ಲ‌ ಹಲವು ದಶಕಗಳ ಇತಿಹಾಸವಿದೆ ಎಂದು ಹರಿಹರದ ಹರಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ತಿಳಿಸಿದರು.
ಹರಮಠದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯಸರ್ಕಾರ 2021 ರಲ್ಲಿ ಜಯಪ್ರಕಾಶ್ ಹೆಗ್ಡೆಯವರ ನೇತೃತ್ವದಲ್ಲಿ ಕುಲಶಾಸ್ತ್ರೀಯ ಅಧ್ಯಯನ ಮಾಡಿಸುತ್ತಿದೆ. ಜಯಪ್ರಕಾಶ್ ಸಮಿತಿ ನೀಡುವ ವರದಿ ಅನುಸರಿಸಿ 2 ಎ ಮೀಸಲಾತಿ ಸಿಗಲಿದೆ. ಈ ಡಿಸಂಬರ್ ನಲ್ಲಿ ಅದರ ಸಂಪೂರ್ಣ ವರದಿ ನೀಡಿದ ನಂತರ ಬಸವರಾಜ್ ಬೊಮ್ಮಾಯಿ ಸರ್ಕಾರ ಮೀಸಲಾತಿ ಪ್ರಕಟಿಸುತ್ತದೆ ಎಂಬ ವಿಶ್ವಾಸ ಇದೆ ಎಂದು ವಚನಾನಂದ ಶ್ರೀ ಅಭಿಪ್ರಾಯಿಸಿದರು. ನಾವು ಮೀಸಲಾತಿ ವಿಚಾರದಲ್ಲಿ ನಮ್ಮದು ಅಚಲ ನಿರ್ಧಾರ ಪ್ರಾಣ ಬಿಟ್ಟೇವು ಆದ್ರೆ ಮೀಸಲಾತಿ‌ ಬಿಡುವುದಿಲ್ಲ ಎಂದರು. 2 ಎ ಮೀಸಲಾತಿ ವಿಚಾರದಲ್ಲಿ ನಮ್ಮ ‌ಸಮುದಾಯದ ಸಾರ್ವಜನಿಕರಲ್ಲಿ ಗೊಂದಲವಿದೆ. ಆ ಗೊಂದಲವನ್ನು ಪರಿಹರಿಸಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಮ್ಮ ಪ್ರತಿನಿಧಿಗಳು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಗದಗ ಸೇರಿದಂತೆ ಹಲವಡೆ ಜಿಲ್ಲಾ ಪ್ರವಾಸ ಮುಗಿಸಿ ಹಳ್ಳಿ ಹಳ್ಳಿಯಲ್ಲು ಸಮಾಜದ ಬಂಧುಗಳನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿದ್ದೇವೆ.ಬರುವ ಡಿಸಂಬರ್ ರೊಳಗೆ ಮೀಸಲಾತಿ ಪ್ರಕಟವಾಗುವ ಸಾಧ್ಯತೆಗಳಿವೆ.ಇದಕ್ಕೆ ನಮ್ಮ ಸಮುದಾಯದ ಸಚಿವರು ಶಾಸಕರು ಪ್ರಯತ್ನ ನಡೆಸಿದ್ದಾರೆ ಎಂದರು
ಕೇಂದ್ರ ಸರ್ಕಾರದ ಹಲವಾರು ಮಂತ್ರಿಗಳ ಜೊತೆ ಸಂಪರ್ಕದಲ್ಲಿದ್ದೇವೆ ಕೇಂದ್ರದಲ್ಲಿ ಓಬಿಸಿ ಗೆ ಪಂಚಮಸಾಲಿ ಲಿಂಗಾಯತರು ಸೇರ್ಪಡೆಯಾಗಬೇಕು ಅದಕ್ಕು ಪ್ರಯತ್ನವು ನಡೆದಿದೆ. ಕೇಂದ್ರವು ಇದೀಗ ಹಸಿರು ನಿಶಾನೆ ಸಿಕ್ಕಿರುವುದರಿಂದ ಅದು ಇನ್ನೊಂದು ಕಡೆ ಆಗುತ್ತದೆ ಎಂದರು.‌
ಸರ್ಕಾರ ಮೀಸಲಾತಿ ಕಾನೂನು ತೊಡಕು ಬರದಂತೆ ಎಚ್ಚರವಹಿಸಬೇಕು.ಮಹಾರಾಷ್ಟ್ರ ದಲ್ಲಿ ಶೇ 16 % ಮೀಸಲಾತಿ ಯನ್ನು ಕೊಟ್ಟರು ಅದು ಸುಪ್ರೀಂ ಕೋರ್ಟ್ ನಲ್ಲಿ ರಿಜಕ್ಟ್ ಆಯಿತು. ಏಕೆಂದರೆ ಅಲ್ಲಿ ಕುಲ ಶಾಸ್ತ್ರೀಯ ಅಧ್ಯಯನ ಆಗಿರಲಿಲ್ಲ.ಆ ಕಾರಣಕ್ಕೆ ಸರ್ಕಾರ ಎಚ್ಚರ ವಹಿಸಬೇಕೆಂದು ಮನವಿ ಮಾಡಿದರು.
ನಮ್ಮದು ಮಂದಗಾಮಿಗಳ ಹೋರಾಟ ನಮ್ಮ ಹೋರಾಟಕ್ಕೆ ನೂರಕ್ಕು ನೂರರಷ್ಟು ಪ್ರತಿಫಲ ಸಿಕ್ಕೇ ಸಿಗುತ್ತದೆ. ನಾವು ಸರ್ಕಾರಕ್ಕೆ ಯಾವುದೇ ಗಡುವು ಕೊಡುವುದಿಲ್ಲ. ಮೀಸಲಾತಿಯಷ್ಟೇ ಕೇಳುತ್ತೇವೆ. ನಿರಂತರ ಪ್ರಯತ್ನವನ್ನು ಎಲ್ಲಿ ಬೇಕು ಅಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದರು. ಇಡೀ ಪಂಚಮಸಾಲಿ ಸಮಾಜದ ಬಂಧುಗಳಿಗೆ ಬೇಕಾಗಿರುವುದು ಮೀಸಲಾತಿ ಅದನ್ನೇ ಪಡೆದೇ ತೀರುತ್ತೇವೆ ಎಂದರು.
ಪಂಚಮಸಾಲಿ ಸಮುದಾಯದಲ್ಲು ಬಡವರಿದ್ದಾರೆ.ಅವರ ಮಕ್ಕಳಿಗೆ ಆರ್ಥಿಕ ಉದ್ಯೋಗದಲ್ಲಿ ಮೀಸಲಾತಿ ಬೇಕಾಗಿದೆ ಹಲವು‌ ಮಹನೀಯರ ನಿರಂತರ ಹೋರಾಟದ ಫಲವಾಗಿ ಮೀಸಲಾತಿ ಸಿಗುತ್ತಿದೆ. ನಾವು ಆಶಾಭಾವನೆಯಿಂದ ಇದ್ದೇವೆ ಎಂದರು.
Back to Top