2ಎ ಮೀಸಲಾತಿ ಸಿಗುವುದು ಶತಃಸಿದ್ದ
ವಚನಾನಂದ ಶ್ರೀಗಳ ಆಗ್ರಹ।। ಉಪ ಜಾತಿ ಕಾಲಂನಲ್ಲಿ ಪಂಚಮಸಾಲಿ ನಮೂದಿಗೆ ಜಾಗೃತಿ
ಓಬಿಸಿ ಶಿಫಾರಸ್ಸಿಗೆ ಆಗ್ರಹ : ಕೇಂದ್ರದ ಓಬಿಸಿ ಮೀಸಲಾತಿ ಅಂತಿಮ ಹಂತಕ್ಕೆ ಬಂದಿದೆ. ಸುಮಾರು 900 ಪುಟಗಳ ದಾಖಲಾತಿಗಳನ್ನು ಕೇಂದ್ರದ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಲ್ಲಿಸಿದ್ದು ಆಯೋಗವು ರಾಜ್ಯ ಸರಕಾರಕ್ಕೆ ವರ್ಗಾವಣೆ ಮಾಡಿದೆ. ರಾಜ' ಸರಕಾರವು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕಿದೆ. ಕೇಂದ್ರದಲ್ಲಿ ಅನುಮೋದನೆ ಆದರೆ ನಮಗೆ ಶೇ.27 ರಷ್ಟುಮೀಸಲಾತಿ ಲಭಿಸಲಿದೆ ಎಂದು ವಚನಾನಂದ ಶ್ರೀಗಳು ಹೇಳಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಈ ಸರಕಾರ 2ಎ ಮೀಸಲಾತಿ ಕೊಟ್ಟೇ ಕೊಡುತ್ತದೆ ಎಂದು ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.
ದಿನಾಂಕ 06-11-2022ರ ಭಾನುವಾರ ರಂದು ಚಿತ್ರದುರ್ಗದ ನಗರದ. ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ. ಮಾತನಾಡಿ, ಪಂಚಮಸಾಲಿಗಳಿಗೆ ರಾಜ್ಯ ಸರಕಾರದಲ್ಲಿ 2ಎ ಮೀಸಲಾತಿ, ಕೇಂದ್ರ ಸರಕಾರದಲ್ಲಿ ಓಬಿಸಿ ಮೀಸಲಾತಿಗಾಗಿ ಆಗ್ರಹಿಸಿ ಕಳೆದ 28 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. 2009ರಲ್ಲಿ ಬಿ. ಎಸ್.ಯಡಿಯೂರಪ್ಪಅವರು ಪಂಚಮಸಾಲಿಸಮಾಜವನ್ನು ಜಾತಿ ಪಟ್ಟಿಯಲ್ಲಿಸೇರಿಸಿ, ಗೆಜೆಟ್ ನೋಟಿಫಿಕೇಷನ್ ಮಾಡಿ,
ಸಾಮಾನ್ಯ ವರ್ಗದಿಂದ 3ಬಿ ಗೆ ಸೇರಿಸಿದ್ದರು. ಆಗಲೇ ನಮಗೆ 2ಎಮೀಸಲಾತಿ ಸಿಗಬೇಕಿತ್ತು. ಈಗ ಬಸವರಾಜ ಬೊಮ್ಮಾಯಿ ಸರಕಾರ ಕುಲಶಾಸ್ತ್ರೀಯ ಅಧ್ಯಯನಕ್ಕೆ ಒಳಪಡಿಸಿದ್ದು ಈಗಾಗಲೇ ರಾಜ್ಯದ 18 ಜಿಲ್ಲೆಗಳಲ್ಲಿ ಕುಲಶಾಸ್ತ್ರೀಯ ಅಧ್ಯಯನ ಆಗಿದೆ ಎಂದರು.
ಪಂಚಮಸಾಲಿ ಜನಜಾಗೃತಿ:
ರಾಜ್ಯ ಸರಕಾರದ ಜಾತಿ ಪಟ್ಟಿಯಲ್ಲಿ 3ಬಿ ಯಲ್ಲಿ ಲಿಂಗಾಯತ, ವೀರಶೈವ, ಪಂಚಮಸಾಲಿಯ 19 ಉಪಜಾತಿಗಳಿವೆ. ಇವರೆಲ್ಲರೂ ಆದಾಯ, ಜಾತಿ ಪ್ರಮಾಣ ಪತ್ರ ಪಡೆಯುವಾಗ ಉಪಜಾತಿ ಕಾಲಂನಲ್ಲಿ ಪಂಚಮಸಾಲಿ ಎಂಬುದಾಗಿ ನಮೂದಿಸಬೇಕು. ಇದರಿಂದ 2ಎ ಮೀಸಲಾತಿ. ಸಿಕ್ಕಾಗ ನಿಜವಾದ ಪಂಚಮಸಾಲಿಗಳಿಗೆ ಅನ್ಯಾಯ ಆಗಲ್ಲ ಎಂದು ಸಮುದಾಯದವರನ್ನು ಎಚ್ಚರಿಸಿದರು. ಈ ಬಗ್ಗೆ ರಾಜ್ಯದಾದ್ಯಂತ ಪ್ರವಾಸ ಮಾಡಿ ಸಮುದಾಯದವರಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಉನ್ನತ: ಹುದ್ದೆಗಳಿಂದ ವಂಚಿತ:
ನಮ್ಮ ಸಮುದಾಯದಲ್ಲಿ ಬೆರಳೆಣಿಕೆಯಷ್ಟು ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ. ಓಬಿಸಿ ಮೀಸಲಾತಿ ಲಭಿಸಿದರೆ ಉನ್ನತ ಮಟ್ಟದ ಅಧಿಕಾರಿಗಳ ಸಂಖ್ಯೆ ಹೆಚ್ಚಲಿದೆ. ನಮ್ಮ ಸಮೀಕ್ಷೆ ಪ್ರಕಾರ ಸಮುದಾಯದಲ್ಲಿ ಕೆಲವರು ಒಂದೆರೆಡು ಅಂಕಗಳಿAದ ಉನ್ನತ ಮಟ್ಟದ ಹುದ್ದೆಗಳ
ಪಡೆದುಕೊಳ್ಳುವ: ವಂಚಿತರಾಗಿದ್ದಾರೆ. ಹಾಗಾಗಿ `ನಮಗೆ ಮೀಸಲಾತಿ ಅವಶ್ಯಕತೆಯಿದೆ ಎಂದು ತಿಳಿಸಿದರು. ರಾಜ್ಯದ ಬಹುಸಂಖ್ಯಾತರಿರುವ ನಾವುಗಳು ಆರ್ಥಿಕವಾಗ್ಯಿ, ಶೆ ಶೈಕ್ಷಣಿಕವಾಗಿ
ಹಿಂದುಳಿದಿದ್ದೇವೆ. ನಮ್ಮ ಮಕ್ಕಳು ಪ್ರತಿಭಾವಂತರಿದ್ದರೂ ಪ್ರೋತ್ಸಾಹ ಸಿಗದ ಕಾರಣ ಉನ್ನತ ಹುದ್ದೆಗಳಿಂದ ವಂಚಿತರಾಗುತ್ತಿದ್ದಾರೆ. ಎಸ್ಸಿ ಎಸ್‌ಟಿ ಸಮುದಾಯದವರಿಗೆ ಮೀಸಲಾತಿ
ಹೆಚ್ಚನ ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಅದೇ ರಿಚಿ ಕುಲಶಾಸ್ತ್ರೀಯ ಆಧ್ಯಯನ ನಡೆಸಿ ಅತೀ ಶೀಘ್ರದಲ್ಲಿ ನಮಗೂ 2ಎ, ಓಬಿಸಿ ಮೀಸಲಾತಿ ಒದಗಿಸಬೇಕು. ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಪಂಚಮಸಾಲಿ ಸಂಘದ ಜಿಲ್ಲಾಧ್ಯಕ್ಷ ಜೆ.ಶಿವಪ್ರಕಾಶ್, ಜಿಲ್ಲಾಧ್ಯಕ್ಷೆ ಉಮಾ ರಮೇಶ್, ಖಜಾಂಚಿ ಜೆ.ಎ. ಮಂಜುಳಾ, ತಾಲೂಕು ಅಧ್ಯಕ್ಷ ಬಸವರಾಜ್, ಮುಖಂಡರಾದ.
ವಿಶ್ವನಾಥ್, ಕರಿಬಸಪ್ಪ ನರೇಂದ್ರಬಾಬು, ಜಿ.ಎಂ.ಪ್ರಕಾಶ್ ಮತ್ತಿತರರಿದ್ದರು.