ಹರಮಾಲೆ ಒಂದು ದೊಡ್ಡ ಸಾಮಾಜಿಕ ಮತ್ತು ಅಧ್ಯಾತ್ಮಿಕ ಕ್ರಾಂತಿಗೆ ಕಾರಣವಾಗುತ್ತಿದೆ. ಸಮಾಜದ ಎಲ್ಲಾ ವರ್ಗಗಳ ಯುವಕ ಯುವತಿಯರಿಂದ ಅತೀವ ಸ್ಪಂದನೆ ವ್ಯಕ್ತವಾಗುತ್ತಿದೆ. ದಾವಣಗೆರೆ ಮಡಿಕಲ್ ಕಾಲೇಜಿನ ಮತ್ತು ಹರಿಹರ ತಪೋವನದ ಆಯುರ್ವೇದಿಕ್ ಹಾಗೂ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕಾಲೇಜಿನಲ್ಲಿ ಮೆಡಿಕಲ್ ಓದುತ್ತಿರುವ ಹಲವು ವಿದ್ಯಾರ್ಥಿಗಳು ಇಂದು ಹರಪೀಠಕ್ಕೆ ಭೇಟಿ ನೀಡಿ ನಮ್ಮ ಆಶೀರ್ವಾದ ಪಡೆದರು. ಹರಮಾಲೆ ಧಾರಣೆ ಮಾಡಿ ಹರಸಂಕಲ್ಪ ಮಾಡಿದರು. ನಾವು ಅವರಿಗೆಲ್ಲಾ ಹರಮಾಲೆಯ ವಿಧಿವಿಧಾನಗಳನ್ನು ಬೋಧಿಸಿದೆವು. ಅವರ ಆಸಕ್ತಿ, ಭಕ್ತಿ, ಶ್ರದ್ಧೆ ನಮ್ಮನ್ನ ಮೂಕವಿಸ್ಮಿತರನ್ನಾಗಿ ಮಾಡಿತು.

ವಿಶೇಷವೆಂದರೆ ಈ ಮೆಡಿಕಲ್ ವಿದ್ಯಾರ್ಥಿಗಳಲ್ಲಿ ಹೊರ ರಾಜ್ಯದಿಂದ ಬಂದ ವಿದ್ಯಾರ್ಥಿಗಳೂ ಇದಾರೆ. ಗುಜರಾತ್, ಆಂಧ್ರ, ತಮಿಳುನಾಡು, ಉತ್ತರ ಪ್ರದೇಶದ ವಿದ್ಯಾರ್ಥಿಗಳಿದಾರೆ. ಎಲ್ಲರೂ ಹರಮಾಲಾಧಾರಣೆ ಮಾಡಿ ಹರಸಂಕಲ್ಪ ಮಾಡಿದರು.
ಈ ಯುವ ಶಕ್ತಿಗೆ ಒಳಿತಾಗಲಿ, ತಮ್ಮ ಭವಿಷ್ಯದ ಜೊತೆಗೆ ದೇಶದ ಭವಿಷ್ಯವನ್ನೂ ಯಶಸ್ವಿಯಾಗಿ ನಿರ್ಮಿಸಲಿ ಎಂದು ನಾವು ಹರಿಹರಾದಿ ಶರಣರಲ್ಲಿ ಪ್ರಾರ್ಥಿಸುತ್ತೇವೆ.

 ------------------------------