ವಚನಾನಂದ ಶ್ರೀ ಗಳಿಗೆ ಉಪರಾಷ್ಟ್ರಪತಿ ಗಳಿಂದ ಸಂಸತ್ ಭವನಕ್ಕೆ ಬರುವಂತೆ ಆಹ್ವಾನ ಪೋನ್ ಮಾಡಿ ಓಮಿಕ್ರಾನ್ ಭೀತಿ ಕಡಿಮೆ ಆದ ಬಳಿಕ ಸಂಸತ್ ಭವನಕ್ಕೆ ಬರುವಂತೆ ಆಹ್ವಾನಿಸಿದ ಉಪರಾಷ್ಟ್ರಪತಿ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಜಗದ್ಗುರು ಪೀಠ ವಚನಾನಂದ ಶ್ರೀ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರಿಂದ ಸ್ವಾಮೀಜಿಗಳ ಯೋಗಸಾಧನೆ ಹಾಗೂ ಜಗದ್ಗುರುಪೀಠ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು.
ಆಜಾದಿ ಅಮೃತ್ ‌ಮಹೋತ್ಸವ ಹಿನ್ನೆಲೆ ಪಂಚಮಸಾಲಿ‌ ಸಮಾಜದ ಕೊಡುಗೆ ಬಗ್ಗೆ ಶ್ರೀ ಗಳಿಂದ ಮಾಹಿತಿ ಪಡೆದ ಉಪರಾಷ್ಟ್ರಪತಿ.

ಹರಜಾತ್ರೆ ಮುಂದೂಡಲು ನಾಯ್ಡು ಸಲಹೆ
ಸದ್ಯ ದೇಶದಲ್ಲಿ ಓಮಿಕ್ರಾನ್ ಭೀತಿ ಹೆಚ್ಚಾಗಿದೆ‌. ಇದೇ ತಿಂಗಳು 14 ಮತ್ತು 15 ರಂದು ಪಂಚಮಸಾಲಿ ಜಗದ್ಗುರು ಪೀಠದಲ್ಲಿ ನಡೆಯಲಿದ್ದ ಹರಜಾತ್ರೆ ಮುಂದೂಡಲು ಸಲಹೆ ನೀಡಿದ ಉಪರಾಷ್ಟ್ರಪತಿ.
ಹೆಚ್ಚು ಜನ ಸೇರುವುದರಿಂದ. ತೊಂದರೆ ಆಗುವ ಸಾದ್ಯತೆ ಇದೆ. ಓಮಿಕ್ರಾನ್ ಭೀತಿ ಕಡಿಮೆ ಆಗುವ ವರೆಗೆ ಹರಜಾತ್ರೆ ಮುಂದೂಡಲು ಶ್ರೀಗಳಿಗೆ ನಾಯ್ಡು ಸಲಹೆ.

ಹರಿಹರಕ್ಕೆ ಬರಲಿರುವ ವೆಂಕಯ್ಯ ನಾಯ್ಡು
ಓಮಿಕ್ರಾನ್ ಭೀತಿ ಕಡಿಮೆ ಆದ ಬಳಿಕ ಹರಜಾತ್ರೆಯಲ್ಲಿ ಪಾಲ್ಗೊಳ್ಳಲು ಹರಿಹರಕ್ಕೆ ಬರುವುದಾಗಿ ಶ್ರೀ ಗಳಿಗೆ ಹೇಳಿದ ನಾಯ್ಡು.
ಪಂಚಮಸಾಲಿ ಸಮಾಜ ಹಾಗೂ ಐತಿಹಾಸಿಕ ಹಿನ್ನೆಲೆ ಬಗ್ಗೆ ವಚನಾನಂದ ಶ್ರೀಗಳಿಂದ ಮಾಹಿತಿ ಪಡೆದ ವೆಂಕಯ್ಯ ನಾಯ್ಡು.
ಬೆಳವಡಿ ಮಲ್ಲಮ್ಮ, ಕೆಳದಿ ಚನ್ನಮ್ಮ ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮ ಹೀಗೆ ಪಂಚಮಸಾಲಿ ಸಮಾಜದ ವೀರ ಮಹಿಳೆಯ ಬಗ್ಗೆ ಮಾಹಿತಿ ನೀಡಿದ ಸ್ವಾಮೀಜಿ.

ರಾಜ್ಯದಲ್ಲಿ 85ಲಕ್ಷ ಹಾಗೂ ಮಹಾರಾಷ್ಟ್ರ,ತೆಲಂಗಾಣ,ಆಂದ್ರಪ್ರದೇಶ,ತಮಿಳುನಾಡು ಸೇರಿದಂತೆ ದೇಶದಲ್ಲಿ ಒಂದು ಕೋಟಿ 50 ಲಕ್ಷ ಪಂಚಮಸಾಲಿಗಳಿದ್ದಾರೆ ಎಂದು ಉಪರಾಷ್ಟ್ರ ಪತಿಗಳಿಗೆ ಮಾಹಿತಿ ನೀಡಿದ ವಚನಾನಂದ ಶ್ರೀ.
ಓಮಿಕ್ರಾನ್ ಭೀತಿ ಕಡಿಮೆ ಆದ ಬಳಿದ ನಿಗದಿತ ಸಮಯಕ್ಕೆ ಹರ ಜಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಶ್ರೀಗಳಿಗೆ ಹೇಳಿದ ಉಪರಾಷ್ಟ್ರಪತಿ.
ಇದೇ ತಿಂಗಳ 14 ಮತ್ತು 15 ರಂದು ಹರಿಹರದ ಹರಕ್ಷೇತ್ರ ಪಂಚಮಸಾಲಿ ಜಗದ್ಗುರು ಪೀಠ ನಡೆಯಲಿದ್ದ ಹರಜಾತ್ರೆ.
ಹರಜಾತ್ರೆ ಗೆ ಆಹ್ವಾನ ನೀಡಿ ಪತ್ರ ತಲುಪಿದ ಹಿನ್ನೆಲೆ ವಚನಾನಂದ ‌ಶ್ರೀಗಳಿಗೆ ಪೋನ್ ಕರೆ ಮಾತನಾಡಿ ಉಪರಾಷ್ಟ್ರಪತಿ.