ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ ಬಿ.ಎಲ್.ಸಂತೋಷಜೀ ಅವರನ್ನು ದೆಹಲಿಯಲ್ಲಿ ದಿನಾಂಕ 14-03-2021ರಂದು ಭೇಟಿಯಾಗಿ ಉಭಯಕುಶಲೋಪರಿ ಸಮಾಲೋಚನೆ ನಡೆಸಲಾಯಿತು. ಬಿ.ಎಲ್.ಸಂತೋಷಜೀ ಅವರು ರಾಷ್ಟ್ರೀಯತೆ ಬಗ್ಗೆ ಅಪಾರ ಪ್ರೀತಿ ಉಳ್ಳವರಾಗಿದ್ದಾರೆ. ಅವರನ್ನು ಪ್ರತಿ ಬಾರಿ ಭೇಟಿಯಾದಾಗಲೆಲ್ಲಾ ಒಂದೊಂದು ಹೊಸ ವಿಚಾರದ ಮಂಥನವಾಗುತ್ತದೆ. ಈ ಬಗ್ಗೆ ಅವರು ಹೊಂದಿರುವ ಆಳವಾದ ಜ್ಞಾನವನ್ನು ನಮಗೆ ತಿಳಿಯಪಡಿಸುತ್ತಾರೆ.  ದೇಶ ವಿದೇಶದ ವಿದ್ಯಮಾನಗಳ ಬಗ್ಗೆ ಅವರೊಂದು ಜ್ಞಾನಭಂಡಾರವಿದ್ದಂತೆ. ಅವರ ಬಳಿ ಮಾತನಾಡಿದಷ್ಟೂ ನಮ್ಮ ಜ್ಞಾನ ಹೆಚ್ಚುತ್ತದೆ. ಅವರೊಬ್ಬ ಅಪಾರ ಜ್ಞಾನವನ್ನು ಹೊಂದಿರುವ ತತ್ತ್ವಜ್ಞಾನಿಗಳಾಗಿದ್ದಾರೆ. ಅವರು ರಾಜ್ಯದ ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಂಡು ದೇಶದ ಬಗ್ಗೆ ಅಪಾರ ಚಿಂತನೆಯನ್ನು ಹೊಂದಿದ್ದು, ಸಮಗ್ರ ದೇಶ ಕಟ್ಟುವತ್ತ ಎಲೆ ಮರೆ ಕಾಯಿಯಂತೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಇಂತಹ ಜ್ಞಾನಿಯವರ ಜೊತೆಗೆ ಮಾತನಾಡಿದರೆ ಸಾಕು ನಮ್ಮ ಜ್ಞಾನಾರ್ಜನೆಯಾಗುತ್ತದೆ.  ಅವರೊಂದಿಗೆ ನಾವು ನಡೆಸಿದ ಮಾತುಕತೆ ವೇಳೆ ಹತ್ತು ಹಲವಾರು ವಿಚಾರಗಳನ್ನು ಹಂಚಿಕೊಂಡೆವು. ಅವರಿಂದ ರಾಷ್ಟ್ರದ ಬಗ್ಗೆ ಹಲವಾರು ವಿಷಯಗಳನ್ನು ತಿಳಿದುಕೊಂಡೆವು. ಇತ್ತೀಚಿನ ದಿನಗಳಲ್ಲಿ ನಾವು ಕೈಗೊಂಡಂತಹ ಕೆಳದಿಯ ಚೆನ್ನಮ್ಮ, ಬೆಳವಡಿ ಮಲ್ಲಮ್ಮ,ಕಿತ್ತೂರು ರಾಣಿ ಚೆನ್ನಮ್ಮ ಕಾರ್ಯಕ್ರಮಗಳ ಬಗ್ಗೆ ಅವರಿಗೆ ಮಾಹಿತಿಯನ್ನು ನೀಡಿದೆವು. ಇದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ, ಆಜಾದಿ ಕಾ ಅಮೃತ ಮಹೋತ