ವಿನಯವಿರದ ವಿದ್ಯಾವಂತರು ಅಪಾಯಕಾರಿ : ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಂಚಮಸಾಲಿ ರಾಜ್ಯಾಧ್ಯಕ್ಷ ಜಿ.ಪಿ. ಪಾಟೀಲ್‌

ಹೊನ್ನಾಳಿ, ಜುಲೈ  24- ಎಲ್ಲಾ ಸಮಾಜಗಳಲ್ಲೂ ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ಸಂಗತಿಯಾದರೂ ಕಲಿತವರಲ್ಲಿ  ವಿನಯವಂತಿಕೆ ಬಾರದಿದ್ದರೆ, ಸಮಾಜಕ್ಕೆ  ಅವರು ಅಷ್ಟೇ ಅಪಾಯಕಾರಿಗಳು ಎಂದು ರಾಜ್ಯ ಪಂಚಮಸಾಲಿ ಸಮಾಜದ ಅಧ್ಯಕ್ಷ  ಜಿ.ಪಿ. ಪಾಟೀಲ್‌ ಹೇಳಿದರು.

ಹೊನ್ನಾಳಿ ತಾಲ್ಲೂಕು ವೀರಶೈವ ಪಂಚಮಸಾಲಿ ಸಮಾಜದಿಂದ ಭಾನುವಾರ ಪಾಂಡುರಂಗ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

 

ಹೊನ್ನಾಳಿ ತಾಲ್ಲೂಕು. ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಸಮಾಜ ಸಂಘಟನೆ ಬಲಗೊಂಡಿದೆ ಎಂಬುದಕ್ಕೆ ಪ್ರೇರಣೆಯಂತೆ ಹರಿಹರ ಪೀಠಕ್ಕೆ ಸ್ಥಳೀಯರಾದ ಹೊನ್ನಾಳಿ ಜ್ಯೋತಿಪ್ರಕಾಶ್‌, ಹರಿಹರ ಹೆಚ್‌.ಪಿ. ಬಾಬಣ್ಣ,  ರಾಜ್ಯ ಮಹಿಳಾ ಕಾರ್ಯದರ್ಶಿಯನ್ನಾಗಿ ದಾವಣಗೆರೆ ಲಕ್ಷ್ಮಿ ನಾಗರಾಜ್‌ರವರು ಆಯ್ಕೆಯಾಗಿರುವುದು ರಾಜ್ಯ ಸಂಘಟನೆಗೆ ಪ್ರೇರಣೆಯಾಗಿದೆ ಎಂದರು. 

 

ತಾಲ್ಲೂಕು ಪಂಚಮಸಾಲಿ ಸಮಾಜದ ಗೌರವ ಅಧ್ಯಕ್ಷ ಡಾ. ರಾಜಕುಮಾರ್‌ ಸಮಾರಂಭ ಉದ್ಭಾಟಿಸಿ ಮಾತನಾಡಿ, 2003 ರಿಂದಲೂ ಸಮಾಜವು ಹಮ್ಮಿಕೊಂಡು ಬಂದಿದ್ದ ಸಮಾಜ ಸಂಘಟನೆ ಸಭೆಗಳು, ಶಿಬಿರಗಳು ಹಾಗೂ ಮುಂದೆ ಹಮ್ಮಿಕೊಳ್ಳುವ ವ್ಯಕ್ತಿತ್ವ ವಿಕಸನ ಶಿಬಿರಗಳ ಬಗ್ಗೆ ವಿವರಿಸಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿ  ಮಾತನಾಡಿದ ವೀರಪ್ಪ ಪಟ್ಟಣಶೆಟ್ಟಿ, ವಿವಿಧ ಘಟಕಗಳ ರಚನೆಯೊಂದಿಗೆ ತಾಲ್ಲೂಕಿನಲ್ಲಿ ಸದೃಢ ಸಮಾಜ ಸಂಘಟನೆಗೆ ಮುಂದಾಗುವುದಾಗಿ ವಿವರಿಸಿದರು. 

 

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ  ಸಾಧನೆಗೈದ. ಪರಮೇಶ್‌ ಪಟ್ಟಣಶೆಟ್ಟಿ, ಮಾಲತೇಶ್‌, ಪದ್ಮಾ ಪ್ರಶಾಂತ್‌, ರುದ್ರೇಶ್‌ ಹೊಸೂರ್‌, ಸವಿತಾ ನಾಡಿಗ್‌, ಕರಿಬಸಪ್ಪ ಶುಂಠಿ, ವಸಂತ್‌, ಉಷಾ ಸಂತೋಷ್‌, ರಮೇಶ್‌, ಸಂದೀಪ್‌, ಪ್ರದೀಪ್‌, ಎಸ್‌.ಕೆ.

ಕೊಟ್ರೇಶ್‌, ಪ್ರವೀಣ್‌, ವಿಜಯಕುಮಾರ್‌, ಹಾಲೇಶ್‌ ನಾಡಿಗ್‌ರವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳ ಪರವಾಗಿ ಶ್ರೀನಿಧಿ ಪಾಟೀಲ್‌ ಮಾತನಾಡಿದರು. ಅತಿಥಿಗಳಾಗಿ ಸಮಾಜದ ರಾಜ್ಯ ಉಪಾಧ್ಯಕ್ಷರಾದ ಪರಮೇಶ್‌ ಪಟ್ಟಣಶೆಟ್ಟಿ, ಹರಿಹರ ಪೀಠದ ಬಾಬಣ್ಣ, ದಾವಣಗೆರೆಯ ಶ್ರೀಮತಿ ರಶ್ಮಿ ನಾಗರಾಜ್‌, ದಾವಣಗೆರೆ ಜಿಲ್ಲಾ ಮಹಿಳಾ ಅಧ್ಯಕ್ಷೆ ಶ್ರೀಮತಿ ಸುಷ್ಮಾ ಪಾಟೀಲ್‌, ನ್ಯಾಮತಿ ಪಂಚಾಕ್ಷರಪ್ಪ,  ಜಿ.ದೊಡ್ಡಪ್ಪ, ಗುರುಶಾಂತಪ್ಪ, ಜಿದೊಡ್ಡಪ್ಪ, ಶಿಲ್ಪಾರಾಜುಗೌಡ, ಹಾಲೇಶ್‌, ಗಿರೀಶ್‌, ಭಾರತಿ ಇನ್ನಿತರರಿದ್ದರು. 

ಹಾಲೇಶ್‌ ಸ್ವಾಗತಿಸಿ, ಕೆ.ವಿ.ಪ್ರಸನ್ನ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಮಾ ರವಿಕುಮಾರ ನಿರೂಪಿಸಿ, ಶಶಿ ದಿವಾಕರ್‌,  ಕವಿತಾ ಚನ್ನೇಶ್‌ ಪ್ರಾರ್ಥಿಸಿದರು. ರಾಜು ಹಿರೇಮಠ ವಂದಿಸಿದರು.