ವೀರಶೈವ ಲಿಂಗಾಯತರಿಗೆ 2 ಎ ಮೀಸಲಾತಿ ಸಿಗಬೇಕೆಂದು ಎಂಬುದು ಇಂದು ನಿನ್ನೆಯ ಹೋರಾಟವಲ್ಲ‌ ಹಲವು ದಶಕಗಳ ಇತಿಹಾಸವಿದೆ ಎಂದು ಹರಿಹರದ ಹರಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ತಿಳಿಸಿದರು.
ಹರಮಠದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯಸರ್ಕಾರ 2021 ರಲ್ಲಿ ಜಯಪ್ರಕಾಶ್ ಹೆಗ್ಡೆಯವರ ನೇತೃತ್ವದಲ್ಲಿ ಕುಲಶಾಸ್ತ್ರೀಯ ಅಧ್ಯಯನ ಮಾಡಿಸುತ್ತಿದೆ. ಜಯಪ್ರಕಾಶ್ ಸಮಿತಿ ನೀಡುವ ವರದಿ ಅನುಸರಿಸಿ 2 ಎ ಮೀಸಲಾತಿ ಸಿಗಲಿದೆ. ಈ ಡಿಸಂಬರ್ ನಲ್ಲಿ ಅದರ ಸಂಪೂರ್ಣ ವರದಿ ನೀಡಿದ ನಂತರ ಬಸವರಾಜ್ ಬೊಮ್ಮಾಯಿ ಸರ್ಕಾರ ಮೀಸಲಾತಿ ಪ್ರಕಟಿಸುತ್ತದೆ ಎಂಬ ವಿಶ್ವಾಸ ಇದೆ ಎಂದು ವಚನಾನಂದ ಶ್ರೀ ಅಭಿಪ್ರಾಯಿಸಿದರು. ನಾವು ಮೀಸಲಾತಿ ವಿಚಾರದಲ್ಲಿ ನಮ್ಮದು ಅಚಲ ನಿರ್ಧಾರ ಪ್ರಾಣ ಬಿಟ್ಟೇವು ಆದ್ರೆ ಮೀಸಲಾತಿ‌ ಬಿಡುವುದಿಲ್ಲ ಎಂದರು. 2 ಎ ಮೀಸಲಾತಿ ವಿಚಾರದಲ್ಲಿ ನಮ್ಮ ‌ಸಮುದಾಯದ ಸಾರ್ವಜನಿಕರಲ್ಲಿ ಗೊಂದಲವಿದೆ. ಆ ಗೊಂದಲವನ್ನು ಪರಿಹರಿಸಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಮ್ಮ ಪ್ರತಿನಿಧಿಗಳು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಗದಗ ಸೇರಿದಂತೆ ಹಲವಡೆ ಜಿಲ್ಲಾ ಪ್ರವಾಸ ಮುಗಿಸಿ ಹಳ್ಳಿ ಹಳ್ಳಿಯಲ್ಲು ಸಮಾಜದ ಬಂಧುಗಳನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿದ್ದೇವೆ.ಬರುವ ಡಿಸಂಬರ್ ರೊಳಗೆ ಮೀಸಲಾತಿ ಪ್ರಕಟವಾಗುವ ಸಾಧ್ಯತೆಗಳಿವೆ.ಇದಕ್ಕೆ ನಮ್ಮ ಸಮುದಾಯದ ಸಚಿವರು ಶಾಸಕರು ಪ್ರಯತ್ನ ನಡೆಸಿದ್ದಾರೆ ಎಂದರು
ಕೇಂದ್ರ ಸರ್ಕಾರದ ಹಲವಾರು ಮಂತ್ರಿಗಳ ಜೊತೆ ಸಂಪರ್ಕದಲ್ಲಿದ್ದೇವೆ ಕೇಂದ್ರದಲ್ಲಿ ಓಬಿಸಿ ಗೆ ಪಂಚಮಸಾಲಿ ಲಿಂಗಾಯತರು ಸೇರ್ಪಡೆಯಾಗಬೇಕು ಅದಕ್ಕು ಪ್ರಯತ್ನವು ನಡೆದಿದೆ. ಕೇಂದ್ರವು ಇದೀಗ ಹಸಿರು ನಿಶಾನೆ ಸಿಕ್ಕಿರುವುದರಿಂದ ಅದು ಇನ್ನೊಂದು ಕಡೆ ಆಗುತ್ತದೆ ಎಂದರು.‌
ಸರ್ಕಾರ ಮೀಸಲಾತಿ ಕಾನೂನು ತೊಡಕು ಬರದಂತೆ ಎಚ್ಚರವಹಿಸಬೇಕು.ಮಹಾರಾಷ್ಟ್ರ ದಲ್ಲಿ ಶೇ 16 % ಮೀಸಲಾತಿ ಯನ್ನು ಕೊಟ್ಟರು ಅದು ಸುಪ್ರೀಂ ಕೋರ್ಟ್ ನಲ್ಲಿ ರಿಜಕ್ಟ್ ಆಯಿತು. ಏಕೆಂದರೆ ಅಲ್ಲಿ ಕುಲ ಶಾಸ್ತ್ರೀಯ ಅಧ್ಯಯನ ಆಗಿರಲಿಲ್ಲ.ಆ ಕಾರಣಕ್ಕೆ ಸರ್ಕಾರ ಎಚ್ಚರ ವಹಿಸಬೇಕೆಂದು ಮನವಿ ಮಾಡಿದರು.
ನಮ್ಮದು ಮಂದಗಾಮಿಗಳ ಹೋರಾಟ ನಮ್ಮ ಹೋರಾಟಕ್ಕೆ ನೂರಕ್ಕು ನೂರರಷ್ಟು ಪ್ರತಿಫಲ ಸಿಕ್ಕೇ ಸಿಗುತ್ತದೆ. ನಾವು ಸರ್ಕಾರಕ್ಕೆ ಯಾವುದೇ ಗಡುವು ಕೊಡುವುದಿಲ್ಲ. ಮೀಸಲಾತಿಯಷ್ಟೇ ಕೇಳುತ್ತೇವೆ. ನಿರಂತರ ಪ್ರಯತ್ನವನ್ನು ಎಲ್ಲಿ ಬೇಕು ಅಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದರು. ಇಡೀ ಪಂಚಮಸಾಲಿ ಸಮಾಜದ ಬಂಧುಗಳಿಗೆ ಬೇಕಾಗಿರುವುದು ಮೀಸಲಾತಿ ಅದನ್ನೇ ಪಡೆದೇ ತೀರುತ್ತೇವೆ ಎಂದರು.
ಪಂಚಮಸಾಲಿ ಸಮುದಾಯದಲ್ಲು ಬಡವರಿದ್ದಾರೆ.ಅವರ ಮಕ್ಕಳಿಗೆ ಆರ್ಥಿಕ ಉದ್ಯೋಗದಲ್ಲಿ ಮೀಸಲಾತಿ ಬೇಕಾಗಿದೆ ಹಲವು‌ ಮಹನೀಯರ ನಿರಂತರ ಹೋರಾಟದ ಫಲವಾಗಿ ಮೀಸಲಾತಿ ಸಿಗುತ್ತಿದೆ. ನಾವು ಆಶಾಭಾವನೆಯಿಂದ ಇದ್ದೇವೆ ಎಂದರು.