2024 ಸರಳರೀತಿಯಲ್ಲಿ ಹರ ಜಾತ್ರಾ ಮಹೋತ್ಸವ
ದಿನಾಂಕ : 29-12-2023
ಇವರಿಗೆ,
ಸಂಪಾದಕರು
ಕನ್ನಡ ದಿನಪತ್ರಿಕೆ ಹಾಗೂ ದೃಶ್ಯ ಮಾಧ್ಯಮ.
ಮಾನ್ಯರೆ,
ದಿನಾಂಕ 26-12-2023ರಂದು ನಡೆದ ಪಂಚಮಸಾಲಿ ಜಗದ್ಗುರು ಪೀಠದ ಟ್ರಸ್ಟಿನ ಸಭೆಯಲ್ಲಿ ಜಗದ್ಗುರು ಶ್ರೀ ವಚನಾನಂದ ಮಹಾ ಸ್ವಾಮೀಜಿಯವರ ಸಾನಿಧ್ಯದಲ್ಲಿ ಹಾಗೂ ಶ್ರೀಪೀಠದ ಪ್ರಧಾನ ಧರ್ಮದರ್ಶಿಗಳಾದ ಶ್ರೀ ಬಿ. ಸಿ. ಉಮಪತಿಯವರ ಅಧ್ಯಕ್ಷತೆಯಲ್ಲಿ ಮತ್ತು ಶ್ರೀ ಪೀಠದ ಆಡಳಿತಾಧಿಕಾರಿಗಳಾದ ಶ್ರೀ ಎಚ್.ಪಿ. ರಾಜಕುಮಾರರವರ ನೇತೃತ್ವದಲ್ಲಿ ಶ್ರೀ ಪೀಠದ . ಎಲ್ಲಾ ಧರ್ಮದರ್ಶಿಗಳು ಹಾಗೂ ರಾಜ್ಯ ಸಮಿತಿಯ ಪದಾಧಿಕಾರಿಗಳ ನಡೆದ ಸಭೆಯಲ್ಲಿ ಈ ಬಾರಿ ರಾಜ್ಯದಲ್ಲಿ ಬರಗಾಲ ಇರುವುದು ಹಾಗೂ ನಮ್ಮ ಸಮಾಜವು ಕೃಷಿ ಪ್ರಧಾನ ರೈತಾಪಿ ವರ್ಗ ಆಗಿರುವುದರಿಂದ ಜನರು ಸಂಕಷ್ಟದಲ್ಲಿ ಇದ್ದಾರೆ ಆದ್ದರಿಂದ “ಹರ ಜಾತ್ರಾ ಮಹೋತ್ಸವ”ವನ್ನು ಈ ವರ್ಷ ಅತ್ಯಂತ ಸರಳರೀತಿಯಲ್ಲಿ 2024 ಜನವರಿ 14 ಮತ್ತು 15 ರಂದು “ಹರ ಜಾತ್ರಾ ಮಹೋತ್ಸವ”ವನ್ನು ಶ್ರೀಪೀಠದಲ್ಲಿ ಸರಳವಾಗಿ ಧಾರ್ಮಿಕ ರೂಪದಲ್ಲಿ ಆಚರಿಸಲು ತೀರ್ಮಾನಿಸಲಾಯಿತು. ಸರಳ “ಹರ ಜಾತ್ರಾ ಮಹೋತ್ಸವದ ಕಾರ್ಯಕ್ರಮ ವಿವರಗಳನ್ನು ಮುಂದಿನ ದಿನಗಳಲ್ಲಿ ಸಮಾಜ ಬಾಂಧವರಿಗೆ ತಿಳಿಸುತ್ತೇವೆ ಎಂದು ಈ ಮೂಲಕ ಶ್ರೀಪೀಠದ ಆಡಳಿತಾಧಿಕಾರಿಗಳಾದ ಶ್ರೀ ಎಚ್ ಪಿ ರಾಜಕುಮಾರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
(ಈ ಸುದ್ದಿಯನ್ನು ತಮ್ಮ ಪತ್ರಿಕೆಗಳಲ್ಲಿ ರಾಜ್ಯದ ಸುದ್ದಿಯಾಗಿ ಪ್ರಕಟವಾಗುವಂತೆ ಮಾಡಲು ಈ ಮೂಲಕ ವಿನಂತಿ)
ವಂದನೆಗಳೊಂದಿಗೆ
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪರವಾಗಿ
ಶ್ರೀ ಎಚ್. ಪಿ. ರಾಜಕುಮಾರ್
ಶ್ರೀಪೀಠದ ಆಡಳಿತಾಧಿಕಾರಿಗಳು
ತುಂಗಾನದಿಗೆ ಬಾಗೀನ ಸಮರ್ಪಣೆ ನೆರವೇರಲಿದೆ. ದಿನಾಂಕ 30-08-2023 ಸಮಯ-ಬೆಳಗ್ಗೆ 10ಕ್ಕೆ ಸ್ಥಳ-ತುಂಗಾರತಿ ತಟ,
ಹರಿಹರ ಹರಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಯೋಗಸಿಂಹಾಸನಾಧೀಶ್ವರ,ಹರಪೀಠಾಧ್ಯಕ್ಷ,ಪಂಚಮಸಾಲಿ ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನಿಧ್ಯದಲ್ಲಿ ತುಂಗಾನದಿಗೆ ಬಾಗೀನ ಸಮರ್ಪಣೆ ನೆರವೇರಲಿದೆ. ದಿನಾಂಕ-ಅಗಷ್ಟ್ 30,2023 ಸಮಯ-ಬೆಳಗ್ಗೆ 10ಕ್ಕೆ ಸ್ಥಳ-ತುಂಗಾರತಿ ತಟ,ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನ ಹಿಂಭಾಗ,ಹರಿಹರ.
ಆಯೋಜಕರು-ಮಹಿಳಾ ಘಟಕ,ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ,ಹರಿಹರ.