ಬ್ಯಾಡಗಿ ತಾಲೂಕಿನ ಪಂಚಮಸಾಲಿ ಸಂಘದ ವತಿಯಿಂದ ಕದರಮಂಡಗಿಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ
ಬ್ಯಾಡಗಿ ತಾಲೂಕಿನ ಪಂಚಮಸಾಲಿ ಸಂಘದ ವತಿಯಿಂದ ಕದರಮಂಡಗಿಯಲ್ಲಿ ಪಿಯುಸಿ ಮತ್ತು ಹತ್ತನೇಯ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ
ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಶಾಸಕರಾದ ಶ್ರೀ ವೀರುಪಾಕ್ಷಪ್ಪ ಬಳ್ಳಾರಿಯವರು,ಜಿಲ್ಲಾಧ್ಯಕ್ಷ ನಾಗರಾಜ್ ಕಡಕೋಳ,ತಾಲೂಕಾ ಅಧ್ಯಕ್ಷ ತಿರುಕಪ್ಪ ಮರಬಸಣ್ಣನ್ನವರು, ಶ್ರೀ ಶಂಕರಗೌಡ ಪಾಟೀಲ,
ಶ್ರೀ ಜಯಣ್ಣ ಶಿರೂರು, ಶ್ರೀಮತಿ ವಸಂತ ಹುಲ್ಲತ್ತಿ,ಶ್ರೀಮತಿ ಗೀತಾ ಕಾಕೋಳ ಹಾಗೂ ಸಮಾಜದ ಹಿರಿಯರು ಉಪಸ್ಥಿತರಿದ್ದರು.
ವಿನಯವಿರದ ವಿದ್ಯಾವಂತರು ಅಪಾಯಕಾರಿ : ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಂಚಮಸಾಲಿ ರಾಜ್ಯಾಧ್ಯಕ್ಷ ಜಿ.ಪಿ. ಪಾಟೀಲ್
ವಿನಯವಿರದ ವಿದ್ಯಾವಂತರು ಅಪಾಯಕಾರಿ : ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಂಚಮಸಾಲಿ ರಾಜ್ಯಾಧ್ಯಕ್ಷ ಜಿ.ಪಿ. ಪಾಟೀಲ್
ಹೊನ್ನಾಳಿ, ಜುಲೈ 24- ಎಲ್ಲಾ ಸಮಾಜಗಳಲ್ಲೂ ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ಸಂಗತಿಯಾದರೂ ಕಲಿತವರಲ್ಲಿ ವಿನಯವಂತಿಕೆ ಬಾರದಿದ್ದರೆ, ಸಮಾಜಕ್ಕೆ ಅವರು ಅಷ್ಟೇ ಅಪಾಯಕಾರಿಗಳು ಎಂದು ರಾಜ್ಯ ಪಂಚಮಸಾಲಿ ಸಮಾಜದ ಅಧ್ಯಕ್ಷ ಜಿ.ಪಿ. ಪಾಟೀಲ್ ಹೇಳಿದರು.
ಹೊನ್ನಾಳಿ ತಾಲ್ಲೂಕು ವೀರಶೈವ ಪಂಚಮಸಾಲಿ ಸಮಾಜದಿಂದ ಭಾನುವಾರ ಪಾಂಡುರಂಗ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಹೊನ್ನಾಳಿ ತಾಲ್ಲೂಕು. ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಸಮಾಜ ಸಂಘಟನೆ ಬಲಗೊಂಡಿದೆ ಎಂಬುದಕ್ಕೆ ಪ್ರೇರಣೆಯಂತೆ ಹರಿಹರ ಪೀಠಕ್ಕೆ ಸ್ಥಳೀಯರಾದ ಹೊನ್ನಾಳಿ ಜ್ಯೋತಿಪ್ರಕಾಶ್, ಹರಿಹರ ಹೆಚ್.ಪಿ. ಬಾಬಣ್ಣ, ರಾಜ್ಯ ಮಹಿಳಾ ಕಾರ್ಯದರ್ಶಿಯನ್ನಾಗಿ ದಾವಣಗೆರೆ ಲಕ್ಷ್ಮಿ ನಾಗರಾಜ್ರವರು ಆಯ್ಕೆಯಾಗಿರುವುದು ರಾಜ್ಯ ಸಂಘಟನೆಗೆ ಪ್ರೇರಣೆಯಾಗಿದೆ ಎಂದರು.
ತಾಲ್ಲೂಕು ಪಂಚಮಸಾಲಿ ಸಮಾಜದ ಗೌರವ ಅಧ್ಯಕ್ಷ ಡಾ. ರಾಜಕುಮಾರ್ ಸಮಾರಂಭ ಉದ್ಭಾಟಿಸಿ ಮಾತನಾಡಿ, 2003 ರಿಂದಲೂ ಸಮಾಜವು ಹಮ್ಮಿಕೊಂಡು ಬಂದಿದ್ದ ಸಮಾಜ ಸಂಘಟನೆ ಸಭೆಗಳು, ಶಿಬಿರಗಳು ಹಾಗೂ ಮುಂದೆ ಹಮ್ಮಿಕೊಳ್ಳುವ ವ್ಯಕ್ತಿತ್ವ ವಿಕಸನ ಶಿಬಿರಗಳ ಬಗ್ಗೆ ವಿವರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವೀರಪ್ಪ ಪಟ್ಟಣಶೆಟ್ಟಿ, ವಿವಿಧ ಘಟಕಗಳ ರಚನೆಯೊಂದಿಗೆ ತಾಲ್ಲೂಕಿನಲ್ಲಿ ಸದೃಢ ಸಮಾಜ ಸಂಘಟನೆಗೆ ಮುಂದಾಗುವುದಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ. ಪರಮೇಶ್ ಪಟ್ಟಣಶೆಟ್ಟಿ, ಮಾಲತೇಶ್, ಪದ್ಮಾ ಪ್ರಶಾಂತ್, ರುದ್ರೇಶ್ ಹೊಸೂರ್, ಸವಿತಾ ನಾಡಿಗ್, ಕರಿಬಸಪ್ಪ ಶುಂಠಿ, ವಸಂತ್, ಉಷಾ ಸಂತೋಷ್, ರಮೇಶ್, ಸಂದೀಪ್, ಪ್ರದೀಪ್, ಎಸ್.ಕೆ.
ಕೊಟ್ರೇಶ್, ಪ್ರವೀಣ್, ವಿಜಯಕುಮಾರ್, ಹಾಲೇಶ್ ನಾಡಿಗ್ರವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳ ಪರವಾಗಿ ಶ್ರೀನಿಧಿ ಪಾಟೀಲ್ ಮಾತನಾಡಿದರು. ಅತಿಥಿಗಳಾಗಿ ಸಮಾಜದ ರಾಜ್ಯ ಉಪಾಧ್ಯಕ್ಷರಾದ ಪರಮೇಶ್ ಪಟ್ಟಣಶೆಟ್ಟಿ, ಹರಿಹರ ಪೀಠದ ಬಾಬಣ್ಣ, ದಾವಣಗೆರೆಯ ಶ್ರೀಮತಿ ರಶ್ಮಿ ನಾಗರಾಜ್, ದಾವಣಗೆರೆ ಜಿಲ್ಲಾ ಮಹಿಳಾ ಅಧ್ಯಕ್ಷೆ ಶ್ರೀಮತಿ ಸುಷ್ಮಾ ಪಾಟೀಲ್, ನ್ಯಾಮತಿ ಪಂಚಾಕ್ಷರಪ್ಪ, ಜಿ.ದೊಡ್ಡಪ್ಪ, ಗುರುಶಾಂತಪ್ಪ, ಜಿದೊಡ್ಡಪ್ಪ, ಶಿಲ್ಪಾರಾಜುಗೌಡ, ಹಾಲೇಶ್, ಗಿರೀಶ್, ಭಾರತಿ ಇನ್ನಿತರರಿದ್ದರು.
ಹಾಲೇಶ್ ಸ್ವಾಗತಿಸಿ, ಕೆ.ವಿ.ಪ್ರಸನ್ನ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಮಾ ರವಿಕುಮಾರ ನಿರೂಪಿಸಿ, ಶಶಿ ದಿವಾಕರ್, ಕವಿತಾ ಚನ್ನೇಶ್ ಪ್ರಾರ್ಥಿಸಿದರು. ರಾಜು ಹಿರೇಮಠ ವಂದಿಸಿದರು.
ಹಂಪಿಯಲ್ಲಿ ಸಂಭ್ರಮದ ಯೋಗ ದಿನಾಚರಣೆ
ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಮಹಿಳಾ ಘಟಕ ದಿಂದ ಪರಿಸರ ದಿನಾಚರಣೆ
ದಿನಾಂಕ 08/06/2022 ರಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ದಾವಣಗೆರೆ ಜಿಲ್ಲಾ ಮತ್ತು ನಗರ, ಹಾಗು ಹೊನ್ನಾಳಿ, ನ್ಯಾಮತಿ,ಹರಿಹರ, ಜಗಳೂರು, ಹರಪನಹಳ್ಳಿ, ರಾಣೆಬೆನ್ನೂರು ತಾಲ್ಲೂಕು ಪಂಚಮಸಾಲಿ ಮಹಿಳಾ ಘಟಕಗಳ
ಹಾಗೂ ಸಮಾಜದ ವಿವಿಧ ಪಂಚಮಸಾಲಿ ಘಟಕಗಳ ಸಹಯೋಗದೊಂದಿಗೆ "ಅಂತಾರಾಷ್ಟ್ರೀಯ ಪರಿಸರ ದಿನಾಚರಣೆ ಅಂಗವಾಗಿ” ಸಸಿ ನೆಡುವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾವಣಗೆರೆ ಜಿಲ್ಲಾ ಪಂಚಮಸಾಲಿ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಸುಷ್ಮ ಪಾಟೀಲ್ ರವರು ವಹಿಸಿದರು, ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯ
ನಿವೃತ್ತ ಅಧಿಕಾರಿಗಳಾದ ಶ್ರೀ ಕೆ.ಬಿ.ಕೊಟ್ರೇಶ್ ರವರು ಮಾತನಾಡಿ ಪರಿಸರ ಮಾಲಿನ್ಯದ ಬಗ್ಗೆ ಹಲವು ಮಾಹಿತಿಯನ್ನು ನೀಡಿದರು,
ಹಾಗೂ ದಾವಣಗೆರೆ ಜಿಲ್ಲಾ ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಿ.ಸಿ. ಉಮಾಪತಿಯವರು, ಸಮಾಜದ ಮಹಿಳಾ ಮುಖಂಡರಾದ ಶ್ರೀಮತಿ ವಸಂತ ಬಸವರಾಜ್ ಹುಲ್ಲತ್ತಿಯವರು, ಶ್ರೀಮತಿ ರಶ್ಮಿ ನಾಗರಾಜ್ ಕುಂಕೋದ್ ದಾವಣಗೆರೆ ನಗರ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ವೀಣಾ ನಟರಾಜ್ ಬೆಳ್ಳೂಡಿ, ನಗರ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪಾರ್ವತಿ ಶಿವಕುಮಾರ್ ಮತ್ತಿಹಳ್ಳಿ , ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ವಾಣಿ ಶಿವಣ್ಣನವರು, ಎಂ. ದೊಡ್ಡಪ್ಪ, ಜಿಲ್ಲಾ ನೌಕರರ ಘಟಕದ ಅಧ್ಯಕ್ಷರು ಶ್ರೀಧರ, ಕಾರ್ಯದರ್ಶಿ ಬಿ.ಎಸ್. ಶಂಭುಲಿಂಗಪ್ಪ, ಎ. ವೀರಭದ್ರಪ್ಪ, ಜಿಲ್ಲಾ ಕಾರ್ಯದರ್ಶಿ ಎಸ್.ಸಿ. ಕಾಶೀನಾಥ್ , ಮಲ್ಲಿನಾಥ್ . ಎಸ್, ಕೆ.ಸಿ. ಉಮಾಕಾಂತ್, ಜಿ. ಷಣ್ಮುಖಪ್ಪ ಮೇಷ್ಟ್ರು, ವಿಜಯನಗರ ಜಿಲ್ಲಾ ಅಧ್ಯಕ್ಷರಾದ ಶ್ರೀ. ಪ್ರಕಾಶ್ ಪಾಟೀಲ್ ರವರು, ನಗರ ನೌಕರರ ಘಟಕದ ಅಧ್ಯಕ್ಷರು ಸುರೇಶ್, ದಾವಣಗೆರೆ ತಾಲ್ಲೂಕ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪುರವಂತರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮೀನಾ ಪ್ರಸಾದ್ ಅಣಪೂರ್ ರವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು ಸಮಾಜದ ಹಿರಿಯರು ಹಾಗೂ ಎಲ್ಲಾ ಘಟಕಗಳ ಪ್ರತಿನಿಧಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.